tag:blogger.com,1999:blog-6936223.post110249744417610422..comments2023-09-10T01:11:02.710-07:00Comments on Random ramblings: ಬೆಂಗಳೂರಿನ ತೊಂದರೆ ಮತ್ತು ಬೇರೆ ಮಾತುಗಳುnIlagrIvahttp://www.blogger.com/profile/04778523144960984421noreply@blogger.comBlogger3125tag:blogger.com,1999:blog-6936223.post-1129271549497240792005-10-13T23:32:00.000-07:002005-10-13T23:32:00.000-07:00ಕರ್ಣಾಟಕ/ಕರ್ನಾಟಕ ಎಂಬ ಚರ್ಚೆ ಹಳೆಯದೇ ನಿಜ. ಆದರೆ ನಮ್ಮದು ...ಕರ್ಣಾಟಕ/ಕರ್ನಾಟಕ ಎಂಬ ಚರ್ಚೆ ಹಳೆಯದೇ ನಿಜ. ಆದರೆ ನಮ್ಮದು ಪ್ರಜಾತಂತ್ರಸರ್ಕಾರವಾಗಿರುವುದರಿಂದ ಜನ ಹೇಳಿದ್ದೇ ಸರಿ. ವ್ಯಾಕರಣ ದೃಷ್ಟಿ ಕೇವಲ ಒಂದು guideline ಅಷ್ಟೆ. ನೀವು ಡಿ.ವಿ.ಜಿ ಯವರ ಸಾಹಿತ್ಯವನ್ನೋದಿದರೆ ಅವರೂ ಸಹ ಕರ್ಣಾಟಕ ಎಂಬ ಪ್ರಯೋಗವನ್ನೇ ಮಾಡುತ್ತಾರೆ. ಆದರೆ ಹೇಳಿದೆನಲ್ಲಾ - ನಮ್ಮದು ಡೆಮಾಕ್ರಸಿ.

ಸಂಸ್ಕೃತದಲ್ಲಿ ಅಂತರ್ರಾಷ್ಟ್ರೀಯ ತಪ್ಪು ಪ್ರಯೋಗ - ಅಂತಾರಾಷ್ಟ್ರಿಯ (ಇಲ್ಲಿ ಷ್ಟ್ರಿಯ ಎಂಬಲ್ಲಿ ಹ್ರಸ್ವ್ 'ಇ'ಕಾರ ಗಮನಿಸಿ) ಎಂಬುದೇ ಸರಿಯಾದದ್ದು. ಇದಕ್ಕೇ ಕಾರಣ ಅಲ್ಲಿನ ವಿಸರ್ಗಸಂಧಿ ನಿಯಮ. ಪುನಃ + ರಚನೆ ಪುನರ್ರಚನೆಯಾಗುವುದಿಲ್ಲ ಪುನಾರಚನೆಯಾಗುತ್ತದೆ (ರ ಕಾರಕ್ಕೆ ಬೇರೆಯ ನಿಯಮ). ಹಾಗೆ ಅಂತಃ ಮತ್ತು ರಾಷ್ಟ್ರಿಯ ಅಂತಾರಾಷ್ಟ್ರಿಯವಾಗುತ್ತದೆ. ರಾಷ್ಟ್ರಿಯ ರಾಷ್ಟ್ರಕ್ಕೆ ಸಂಬಂಧ ಪಟ್ಟದ್ದು ಎಂದಾಗುತ್ತದೆ. ಈಗ ನಾಗರೀಕ ತಪ್ಪು ನಾಗರಿಕ ಸರಿ.

ಕನ್ನಡದಲ್ಲೂ ಅದೇ ಇರಬೇಕು. ಏಕೆಂದರೆ "ಅಂತಃ" ಮತ್ತು "ರಾಷ್ಟ್ರಿಯ" ಇವೆರಡೂ ಸಂಸ್ಕೃತಪದಗಳೇ. ಸಂಸ್ಕೃತಪದವನ್ನುಪಯೋಗಿಸುವಾಗ ಅದರದೇ ವ್ಯಾಕರಣವನ್ನು ಉಪಯೋಗಿಸುವುದು ಸರಿ.

ಈಗ್ಗೆ ಹತ್ತು ವರ್ಷಗಳ ಹಿಂದೆ "ಅಂತರರಾಷ್ಟ್ರೀಯ" ಎಂದು ಕನ್ನಡದಲ್ಲಿ ಬಹುಮಂದಿ ಉಪಯೋಗಿಸುತ್ತಿದ್ದರು. ಆದರೆ ಈಗ ಅಂತಾರಾಷ್ಟ್ರೀಯ ಒಪ್ಪಿಗೆಯಾಗಿದೆ. ಇನ್ನು ಸ್ವಲ್ಪದಿನಗಳಾದ ಮೇಲೆ ಬೇರೇನಾಗುತ್ತದೆಯೋ?

ಅದಿರಲ. ಬರಹ/ಬರೆಹ ಇವೆರಡರಲ್ಲಿ ಯಾವುದು ಸರಿ ಎಂದು ಹೇಳಬಲ್ಲಿರಾ? ಮೊದಲನೆಯದು ರೂಢಿಯಿಂದ ಸರಿ. ಎರಡನೆಯದು ವ್ಯಾಕರಣಬಲದಿಂದ ಸರಿ.

ಹಾಗೆ ನೋಡಿದಾಗ ನಮ್ಮ ಸಮೂಹಮಾಧ್ಯಮಗಳು ಭಾಷೆಯ ಮೇಲೆ ದೊಡ್ಡ ಪರಿಣಾಮವನ್ನುಂಟು ಮಾಡುತ್ತವೆ. ಉದಾಹರಣೆಗೆ - ಅಂತಾರಾಷ್ಟ್ರಿಯ ಎನ್ನುವುದು ಸರಿಯಾದರೂ ಅಂತರರಾಷ್ಟ್ರಿಯ/ಅಂತಾರಾಷ್ಟ್ರೀಯಗಳೇ ಪತ್ರಿಕೆ ಮುಂತಾದ ಮಾಧ್ಯಮಗಳು ಮಾಡಿಸಿರುವ ರೂಢಿಯಿಂದ ಸರಿಯೆಂದು ಕಾಣುತ್ತವೆ.

ಇದರ ಬಗ್ಗೆ ನಿಮಗೀಗ ಏನನಿಸುತ್ತದೆ?

-ನೀಲಗ್ರೀವnIlagrIvahttps://www.blogger.com/profile/04778523144960984421noreply@blogger.comtag:blogger.com,1999:blog-6936223.post-1129199111197475802005-10-13T03:25:00.000-07:002005-10-13T03:25:00.000-07:00ಮಾನ್ಯರೆ ನಿಮ್ಮ ಬಹುಭಾಷಾ ಬ್ಲಾಗ್ ನೋಡಿ ಸಂತೋಷವಾಯಿತು .ಇಲ...ಮಾನ್ಯರೆ

ನಿಮ್ಮ ಬಹುಭಾಷಾ ಬ್ಲಾಗ್ ನೋಡಿ ಸಂತೋಷವಾಯಿತು .

ಇಲ್ಲಿ ಈ ಕೆಳಕಂಡಂತೆ ನಿಮ್ಮ ಟಿಪ್ಪಣಿ ನೋಡಿದೆ.

ಕರ್ಣಾಟಕವೆಂದೇ ಏಕೆ ಬರೆಯುತ್ತೇನೆ ಎಂದು ಕೇಳಿದರೆ - ನನ್ನ ಉತ್ತರ - ಕರ್ಣಾಟಕ ಸರಿ, ಕರ್ನಾಟಕ - ಬಹಳ ಉಪಯೋಗಿಸಿದರೂ ಸಹ - ತಪ್ಪು ಎಂದು. ಇದೇಕೆ ಎಂದು ಕೇಳಿದರೆ - ಪಾಣಿನಿಯ ಅಷ್ಟಾಧ್ಯಾಯಿಯ ಸೂತ್ರ - "ರಷಾಭ್ಯಾಂ ನೋಣಃ ಸಮಾನಪದೇ" - ಇದನ್ನು ನೋಡಬಹುದಾಗಿದೆ. ಈ ಸೂತ್ರದ ಅರ್ಥ - "ಒಂದು ಸಂಪೂರ್ಣ ಪದದಲ್ಲಿ ರ, ಅಥವಾ ಷ ಬಂದರೆ - ನಂತರ ಬಂದ 'ನ' ಅಕ್ಷರವು 'ಣ' ಅಕ್ಷರವಾಗಿ ಪರಿವರ್ತನೆ ಹೊಂದುತ್ತದೆ ಎಂದು. ಉದಾ : ಉಷ್ಣ - ಈಗ ಉಷ್ನ (ಇಲ್ಲಿ 'ನ'ಕಾರದ ಒತ್ತು ಗಮನಿಸಿ) ಎಂದು ಹೇಳುವುದು ಅಷ್ಟು ಸ್ವಾಭಾವಿಕವಾಗದು. ಉಷ್ಣ (ಣ ಕಾರವೇ ಸಾಧು). ಇದರ ಅರ್ಥವೇನೆಂದರೆ ನಮ್ಮ ಸರ್ಕಾರ ದೊಡ್ಡ ತಪ್ಪುಗಳನ್ನು ಪ್ರತಿದಿನವೂ ತಪ್ಪು ಮುದ್ರಣ ಮಾಡಿಸುವ ಮೂಲಕ ಮಾಡುತ್ತಿದೆ ಎಂದು.

ಈ ಕುರಿತು ನನಗೆ ಗೊತ್ತಿರುವ ಮಟ್ಟಿಗೆ ನಿಮಗೆ ಹೇಳಬಯಸುವದೆಂದರೆ . ಕರ್ನಾಟಕ / ಕರ್ಣಾಟಕ - ಯಾವುದು ಸರಿ ಎಂಬ ಬಗ್ಗೆ ಕರ್ನಾಟಕ ಏಕೀಕರಣ ಮತ್ತು ನಾಮಕರಣ ಸಂದರ್ಭದಲ್ಲಿ ಚರ್ಚೆ ಬಹಳ ಹಿಂದೆಯೇ ಆಗಿ ಹೋಗಿದೆ . ವಿವರ ನನಗೆ ಗೊತ್ತಿಲ್ಲ / ಸಿಕ್ಕಿಲ್ಲ . ಅಸ್ಪಷ್ಟ ಉತ್ತರವೊಂದನ್ನು ನನಗೆ ಒಬ್ಬರು ಕೊಟ್ಟಿದ್ದಾರೆ . ಏನೇ ಇರಲಿ ಈಗ ಕರ್ನಾಟಕ ಎಂದೇ ಎಲ್ಲರೂ ಒಪ್ಪಿದ್ದಾರೆ. ಆ ಪ್ರಕಾರ ಉಪಯೋಗಿಸುತ್ತಲೂ ಇದ್ದಾರೆ .
ಹೀಗಾಗಿ "ಇದರ ಅರ್ಥವೇನೆಂದರೆ ನಮ್ಮ ಸರ್ಕಾರ ದೊಡ್ಡ ತಪ್ಪುಗಳನ್ನು ಪ್ರತಿದಿನವೂ ತಪ್ಪು ಮುದ್ರಣ ಮಾಡಿಸುವ ಮೂಲಕ ಮಾಡುತ್ತಿದೆ " ಎನ್ನುವದು ಬಹುಶ: ತಪ್ಪಾಗುತ್ತದೆ.

ನಿಮಗೆ ಗೊತ್ತೆ ? ಅಂತರ್ರಾಷ್ಟ್ರೀಯ / ಅಂತಾರಾಷ್ಟ್ರೀಯ ಯವುದು ಸರಿ ?

ಸಂಸ್ಕೃತದಲ್ಲಿ ಅಂತರ್ರಾಷ್ಟ್ರೀಯ . ಕನ್ನಡದಲ್ಲಿ ಅಂತಾರಾಷ್ಟ್ರೀಯ.

ನಿಮ್ಮ

ಶ್ರೀಕಾಂತ ಮಿಶ್ರಿಕೋಟಿ.Anonymousnoreply@blogger.comtag:blogger.com,1999:blog-6936223.post-1129199090811609582005-10-13T03:24:00.000-07:002005-10-13T03:24:00.000-07:00ಮಾನ್ಯರೆ ನಿಮ್ಮ ಬಹುಭಾಷಾ ಬ್ಲಾಗ್ ನೋಡಿ ಸಂತೋಷವಾಯಿತು .ಇಲ...ಮಾನ್ಯರೆ

ನಿಮ್ಮ ಬಹುಭಾಷಾ ಬ್ಲಾಗ್ ನೋಡಿ ಸಂತೋಷವಾಯಿತು .

ಇಲ್ಲಿ ಈ ಕೆಳಕಂಡಂತೆ ನಿಮ್ಮ ಟಿಪ್ಪಣಿ ನೋಡಿದೆ.

ಕರ್ಣಾಟಕವೆಂದೇ ಏಕೆ ಬರೆಯುತ್ತೇನೆ ಎಂದು ಕೇಳಿದರೆ - ನನ್ನ ಉತ್ತರ - ಕರ್ಣಾಟಕ ಸರಿ, ಕರ್ನಾಟಕ - ಬಹಳ ಉಪಯೋಗಿಸಿದರೂ ಸಹ - ತಪ್ಪು ಎಂದು. ಇದೇಕೆ ಎಂದು ಕೇಳಿದರೆ - ಪಾಣಿನಿಯ ಅಷ್ಟಾಧ್ಯಾಯಿಯ ಸೂತ್ರ - "ರಷಾಭ್ಯಾಂ ನೋಣಃ ಸಮಾನಪದೇ" - ಇದನ್ನು ನೋಡಬಹುದಾಗಿದೆ. ಈ ಸೂತ್ರದ ಅರ್ಥ - "ಒಂದು ಸಂಪೂರ್ಣ ಪದದಲ್ಲಿ ರ, ಅಥವಾ ಷ ಬಂದರೆ - ನಂತರ ಬಂದ 'ನ' ಅಕ್ಷರವು 'ಣ' ಅಕ್ಷರವಾಗಿ ಪರಿವರ್ತನೆ ಹೊಂದುತ್ತದೆ ಎಂದು. ಉದಾ : ಉಷ್ಣ - ಈಗ ಉಷ್ನ (ಇಲ್ಲಿ 'ನ'ಕಾರದ ಒತ್ತು ಗಮನಿಸಿ) ಎಂದು ಹೇಳುವುದು ಅಷ್ಟು ಸ್ವಾಭಾವಿಕವಾಗದು. ಉಷ್ಣ (ಣ ಕಾರವೇ ಸಾಧು). ಇದರ ಅರ್ಥವೇನೆಂದರೆ ನಮ್ಮ ಸರ್ಕಾರ ದೊಡ್ಡ ತಪ್ಪುಗಳನ್ನು ಪ್ರತಿದಿನವೂ ತಪ್ಪು ಮುದ್ರಣ ಮಾಡಿಸುವ ಮೂಲಕ ಮಾಡುತ್ತಿದೆ ಎಂದು.

ಈ ಕುರಿತು ನನಗೆ ಗೊತ್ತಿರುವ ಮಟ್ಟಿಗೆ ನಿಮಗೆ ಹೇಳಬಯಸುವದೆಂದರೆ . ಕರ್ನಾಟಕ / ಕರ್ಣಾಟಕ - ಯಾವುದು ಸರಿ ಎಂಬ ಬಗ್ಗೆ ಕರ್ನಾಟಕ ಏಕೀಕರಣ ಮತ್ತು ನಾಮಕರಣ ಸಂದರ್ಭದಲ್ಲಿ ಚರ್ಚೆ ಬಹಳ ಹಿಂದೆಯೇ ಆಗಿ ಹೋಗಿದೆ . ವಿವರ ನನಗೆ ಗೊತ್ತಿಲ್ಲ / ಸಿಕ್ಕಿಲ್ಲ . ಅಸ್ಪಷ್ಟ ಉತ್ತರವೊಂದನ್ನು ನನಗೆ ಒಬ್ಬರು ಕೊಟ್ಟಿದ್ದಾರೆ . ಏನೇ ಇರಲಿ ಈಗ ಕರ್ನಾಟಕ ಎಂದೇ ಎಲ್ಲರೂ ಒಪ್ಪಿದ್ದಾರೆ. ಆ ಪ್ರಕಾರ ಉಪಯೋಗಿಸುತ್ತಲೂ ಇದ್ದಾರೆ .
ಹೀಗಾಗಿ "ಇದರ ಅರ್ಥವೇನೆಂದರೆ ನಮ್ಮ ಸರ್ಕಾರ ದೊಡ್ಡ ತಪ್ಪುಗಳನ್ನು ಪ್ರತಿದಿನವೂ ತಪ್ಪು ಮುದ್ರಣ ಮಾಡಿಸುವ ಮೂಲಕ ಮಾಡುತ್ತಿದೆ " ಎನ್ನುವದು ಬಹುಶ: ತಪ್ಪಾಗುತ್ತದೆ.

ನಿಮಗೆ ಗೊತ್ತೆ ? ಅಂತರ್ರಾಷ್ಟ್ರೀಯ / ಅಂತಾರಾಷ್ಟ್ರೀಯ ಯವುದು ಸರಿ ?

ಸಂಸ್ಕೃತದಲ್ಲಿ ಅಂತರ್ರಾಷ್ಟ್ರೀಯ . ಕನ್ನಡದಲ್ಲಿ ಅಂತಾರಾಷ್ಟ್ರೀಯ.

ನಿಮ್ಮ

ಶ್ರೀಕಾಂತ ಮಿಶ್ರಿಕೋಟಿ.Anonymousnoreply@blogger.com