tag:blogger.com,1999:blog-6936223.post1537389126847864046..comments2023-09-10T01:11:02.710-07:00Comments on Random ramblings: ಭೈರಪ್ಪನವರ ಪರ್ವ: ಚಿಂತನೆಗಳು - ಭಾಗ ೧nIlagrIvahttp://www.blogger.com/profile/04778523144960984421noreply@blogger.comBlogger5125tag:blogger.com,1999:blog-6936223.post-68131804446868268362007-01-08T23:22:00.000-08:002007-01-08T23:22:00.000-08:00ಪ್ರತಿಕ್ರಯಿಸಿದವರಿಗೆ ಧನ್ಯವಾದಗಳು. ನಿಮ್ಮ ಬ್ಲಾಗ್ ಕೊಂಡಿಗ...ಪ್ರತಿಕ್ರಯಿಸಿದವರಿಗೆ ಧನ್ಯವಾದಗಳು. ನಿಮ್ಮ ಬ್ಲಾಗ್ ಕೊಂಡಿಗಳನ್ನು ನೀಡಿದಕ್ಕಾಗಿ ಧನ್ಯವಾದಗಳು. ಖಂಡಿತ ಓದುತ್ತೇನೆ.

ಆಫೀಸಿನಲ್ಲಿ ಕೆಲಸದ ಹೆಚ್ಚಳದಿಂದ ಒಂದು ಘಂಟೆ ನಿರಾಳವಾಗಿ ಕುಳಿತು ಬರೆಯುವುದಕ್ಕೂ ಸಮಯ ಸಿಗುವುದಿಲ್ಲ. ನನಗೆ ಸಮಯ ಸಿಗುವ ಹೊತ್ತಿಗೆ ಪರ್ವದ ಗುಂಗು ಹೋಗಿಬಿಟ್ಟಿರುತ್ತದೋ ಏನೋ !

ಪರ್ವದಲ್ಲಿ ನನಗಿಷ್ಟವಾಗದ ಸಂಗತಿಗಳೂ, ಮೂಲಭಾರತದೊಂದಿಗೆ ತುಲನೆ ಮಾಡಿದಾಗ ಸ್ವಲ್ಪ ಅಸಮಂಜಸ ವಿಷಯಗಳೂ ಕಾಣಿಸಿದವು. ಆದರೆ ಅದು ಒಂದು ಹಿರಿಯ ಕೃತಿ ಎಂಬುದನ್ನು ನಿಃಸಂಶಯವಾಗಿ ಹೇಳಬಹುದು.

ಎರಕ ಅವರೆ,ನೀವು ಕಾಲಕಳೆದಂತೆ ಸಂಸ್ಕೃತಿ ಉತ್ತಮಗೊಳ್ಳುತ್ತದೆಂಬ ಅಭಿಪ್ರಾಯವನ್ನು ಭೈರಪ್ಪನವರದೆಂದು ಹೇಳುತ್ತೀರಿ. ಆದರೆ ನನಗೆ ಹಾಗನ್ನಿಸುವುದಿಲ್ಲ. "ಪರ್ವ"ದಲ್ಲೂ ಹಾಗೇನು ಕಾಣಿಸಿಲ್ಲ. ಕಾಲಕ್ರಮೇಣ ಧರ್ಮದ ಆಚರಣೆ ನಿಶ್ಚಯವಾಗಿ ಬದಲಾಯಿಸಿದರೂ, ಅದರ ಮೂಲ ಆಶಯ ಬದಲಾಗಲು ಸಾಧ್ಯವಿದೆ. "ನಿಯೋಗ"ದ ಪದ್ಧತಿ ಒಳ್ಳೆಯದೂ ಅಲ್ಲ, ಕೆಟ್ಟದ್ದೂ ಅಲ್ಲ. ಆದರೆ ಅದು ಈಗ ಇಲ್ಲದೇ ಹೋಗಿರುವುದೇ ಧರ್ಮಾಚರಣೆಗಳಲ್ಲಿನ ಬದಲಾವಣೆ ತೋರಿಸುತ್ತದೆ.

ಇನ್ನೊಂದು ಉದಾಹರಣೆಯೆಂದರೆ - ಮಾಂಸಭಕ್ಷಣೆ. ವೇದ ಕಾಲದದಲ್ಲಿ ಋಷಿಗಳು ಮಾಂಸಾಹಾರಿಗಳಾಗಿದ್ದರು ಎನ್ನುವುದು ಆಶ್ಚರ್ಯ ಪಡುವ ವಿಷಯವೇನಲ್ಲ. ಆದರೆ ಈಗ ಆ ರೀತಿಯ ಜನ ಮಾಂಸ ತಿನ್ನುವುದಿಲ್ಲ. ಈಗ ಮಾಂಸ ಭಕ್ಷಣೆಯನ್ನು ದಕ್ಷಿಣದ ಬ್ರಾಹ್ಮಣರಂತೂ ಅಧರ್ಮವೆಂದಾಗಿ ಕಾಣುತ್ತಾರೆ. ನಾನು ನಿಯೋಗದ ಬಗ್ಗೆ ಬರೆದಿದ್ದು ಈ ಅರ್ಥದಲ್ಲಿ.

ಮಂಜು ಅವರೆ, ನಮ್ಮ ತಂದೆಯವರಿಗೂ ನಿಮ್ಮ ಹಾಗೇ ಅನ್ನಿಸಿತ್ತು. ಅವರು ಪರ್ವ ಮೊದಲ ಬಾರಿ ಓದಿದಾಗ ಕುಮಾರವ್ಯಾಸಭಾರತವನ್ನು ಓದಿದ ಅವರಿಗೆ ಪರ್ವದ ಪಾತ್ರಗಳು ಸಪ್ಪೆಯಾಗಿ ಆಘಾತಕಾರಿಯಾಗಿ ಕೂಡ ಕಂಡವು. ಅವರು ಹೇಳುತ್ತಿದ್ದ ಈ ವಿಷಯವನ್ನು ಹಲವು ಬಾರಿ ಕೇಳಿದ ನಾನು "prepared for the worst" ಆಗಿದ್ದೆ. ಆದ್ದರಿಂದ ನನಗೆ ಅಷ್ಟು ಆಘಾತವೆನ್ನಿಸಲಿಲ್ಲ. :)nIlagrIvahttps://www.blogger.com/profile/04778523144960984421noreply@blogger.comtag:blogger.com,1999:blog-6936223.post-89985069723698034402007-01-05T10:14:00.000-08:002007-01-05T10:14:00.000-08:00ನಿಮ್ಮ ಅನಿಸಿಕೆಗಳು ಉತ್ತಮವಾಗಿ ವ್ಯಕ್ತಪಡಿಸಿದ್ದೀರಿ- ಧನ್ಯ...ನಿಮ್ಮ ಅನಿಸಿಕೆಗಳು ಉತ್ತಮವಾಗಿ ವ್ಯಕ್ತಪಡಿಸಿದ್ದೀರಿ- ಧನ್ಯವಾದಗಳು. ನಿಮ್ಮ ಲೇಖನವನ್ನು ಮುಂದುವರಿಸಿ.

'ಪರ್ವ' ದಂತಹ ಮತ್ತೊಂದು ಕಾದಂಬರಿ 'ನ ಭೂತೋ ನ ಭವಿಷ್ಯತಿ' ಅನ್ಸತ್ತೆ ನನಗೆ. ಪ್ರಾಯಶ: ಇದನ್ನು ನನ್ನ ತಾರುಣ್ಯದ ಪ್ರಾರಂಭದ ದಿನಗಳಲ್ಲಿ ಓದಿದ್ದರೆ ಅಷ್ಟೊಂದು ಪ್ರಭಾವಿತನಾಗಿರ್ತಿರಲಿಲ್ಲ ಅನ್ಸತ್ತೆ. ಏಕೆಂದರೆ ಆಗಿನ್ನೂ ನನ್ನ ಮನಸ್ಸು ಮತ್ತು ಬುದ್ಧಿ ಈ ಪಾತ್ರಗಳನ್ನು ಸಾಮಾನ್ಯ ಮನುಷ್ಯರಂತೆ ನೋಡಲು ಬಿಡುತ್ತಿರಲಿಲ್ಲ (ಆಗಲೂ ಭೈರಪ್ಪನವರ ನಂ. ೧ ಅಭಿಮಾನಿಯಾಗಿದ್ರೂ ಸಹ).

ನಾನು 'ಪರ್ವ' ದ ವಿಮರ್ಶಾ ಕೃತಿಗಳನ್ನು ಪ್ರಯತ್ನಪೂರ್ವಕವಾಗಿ ದೂರ ಇಟ್ಟಿದ್ದೇನೆ. ಈ ಕೃತಿಯಲ್ಲಿ ನಾನು ಮೆಚ್ಚಿದ ಪಾತ್ರಗಳೆಂದರೆ ಕುಂತಿ, ದ್ರೌಪದಿ ಮತ್ತು ಕರ್ಣ. 'ಪರ್ವ' ಪ್ರತಿಯೊಂದು ಸಲ ಓದಿದಾಗಲೂ ಬೇರೆ ಬೇರೆ ರೀತಿಯಾದ ಸ್ತರದಲ್ಲಿ ಕಾಣುತ್ತದೆ!ಮಂಜು ಶಂಕರ್https://www.blogger.com/profile/09849821626041779261noreply@blogger.comtag:blogger.com,1999:blog-6936223.post-86095213479570531672007-01-03T23:35:00.000-08:002007-01-03T23:35:00.000-08:00ನಿಮ್ಮ ಮಾತು ಒಪ್ಪುವಂಥದ್ದು. ಭೈರಪ್ಪನವರ ಮತ್ತೊಂದು ಕಾದಂಬರ...ನಿಮ್ಮ ಮಾತು ಒಪ್ಪುವಂಥದ್ದು. ಭೈರಪ್ಪನವರ ಮತ್ತೊಂದು ಕಾದಂಬರಿಯಲ್ಲಿ(ಬಹುಶಃ ಧರ್ಮಶ್ರೀ ಇರಬೇಕು) ಒಂದು ಮಾತು ಬರುತ್ತದೆ, ಯಾವುದೇ ಸಂಸ್ಕೃತಿಯಾಗಲೀ ಕಾಲಕಳೆದಂತೆ ಉತ್ತಮಗೊಳ್ಳುತ್ತಾ ಹೋಗುತ್ತದೆ ಎಂಬುದಾಗಿ. ಈ ಮಾತನ್ನು ಪರ್ವದಲ್ಲಿ ಬರುವ ನಿಯೋಗಕ್ಕೆ ಹೊಂದಿಸಿರುವಂತೆ ಕಾಣುತ್ತದೆ.

ನಾನು ಈಗ್ಗೆ ಎರಡು ತಿಂಗಳ ಹಿಂದೆ ಪರ್ವವನ್ನು ಓದಿದ್ದೆ. ಕಾಕತಾಳೀಯವೆಂದರೆ ಅದರ ಮರುದಿನವೇ, ಒಂದು ಉಪನ್ಯಾಸಕ್ಕೆ ಹೋಗಿದ್ದೆ. ಉಪನ್ಯಾಸ ನೀಡುತ್ತಿದ್ದವರು ಮೇಲುಕೋಟೆಯ ಆಚಾರ್ಯರು. ಅವರು ಆ ದಿನ ಪರ್ವದಲ್ಲಿ ಬರುವ ಗಾಂಧಾರಿಯ ಪಾತ್ರದ ವಿವರಣೆ ತಪ್ಪು ಎಂದು ಹೇಳಿದ್ದರು. ಇದರ ಕುರಿತಾಗಿ ನನ್ನ ಬ್ಲಾಗಿನಲ್ಲಿ http://sampada.net/blog/sunil_jayaprakash/13/11/2006/2451 ಪ್ರಸ್ತಾಪಿಸಿದ್ದೆ. ಬಿಡುವಾದಾಗ ಓದಿ ನೋಡಿ.ಸುನಿಲ್ ಜಯಪ್ರಕಾಶ್https://www.blogger.com/profile/06600868283790086691noreply@blogger.comtag:blogger.com,1999:blog-6936223.post-14728338764747239792007-01-03T21:10:00.000-08:002007-01-03T21:10:00.000-08:00ಸರ್,
ಪರ್ವ ನಾನು ಓದಿದ ಅತುತ್ತಮ ಕೃತಿಗಳಲ್ಲಿ ಒಂದು. ಅದನ್...ಸರ್,

ಪರ್ವ ನಾನು ಓದಿದ ಅತುತ್ತಮ ಕೃತಿಗಳಲ್ಲಿ ಒಂದು. ಅದನ್ನು ಓದುತ್ತಿದ್ದ ಕಾಲದಲ್ಲಿ, ಓದಿಯಾದಮೇಲೆ ಮೂಡಿ ನಿಲ್ಲುವ ಭಾವ ನಿಜಕ್ಕೂ ಭೈರಪ್ಪರೆಡೆಗೆ ಬೆರಗು. ಅಷ್ಟೊಂದು ವಿಶ್ಲೇಷಣಾತ್ಮಕವಾಗಿ, study ಮಾಡಿ ಬರೆದಿದ್ದಾರಲ್ಲ; ನಿಜಕ್ಕೂ he is great.

ಪರ್ವದ ಬಗ್ಗೆ ನಾನೂ ಒಂದು ಟಿಪ್ಪಣಿ ಬರೆದಿದ್ದೇನೆ ನನ್ನ ಬ್ಲಾಗಿನಲ್ಲಿ. 'Parva in short' ಅನ್ನಬಹುದೇನೋ. ಆದರೆ ಅದನ್ನು ಪೂರ್ತಿ ಮಾಡಲು ಇನ್ನೂ ಪುರುಸೊತ್ತು ಆಗಿಲ್ಲ. ಪುರುಸೊತ್ತಾದರೆ ಓದಿ:

http://hisushrutha.blogspot.com/2006/08/blog-post_28.htmlSushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-6936223.post-61489855504583339442006-12-29T03:20:00.000-08:002006-12-29T03:20:00.000-08:00ಆತ್ಮೀಯ ನೀಲಗ್ರೀವರಿಗೆ,
ಹೊಸ ವರ್ಷದ ಹಾರ್ಧಿಕ ಶುಭಾಶಯಗಳು.
...ಆತ್ಮೀಯ ನೀಲಗ್ರೀವರಿಗೆ,
ಹೊಸ ವರ್ಷದ ಹಾರ್ಧಿಕ ಶುಭಾಶಯಗಳು.
ನಿಮ್ಮ ಈ ವ್ಯಾಖ್ಯಾನ ಓದಿ ಬಹಳ ಸಂತೋಷವಾಯಿತು. ನಾನು 'ಪರ್ವ' ಇನ್ನೂ ಓದಿಲ್ಲ. ನಿಮ್ಮ ಲೇಖನ ಓದಿದ ನಂತರ ಇನ್ನು ತಡ ಮಾಡಕೂಡದು ಎಂದು ಮನಸ್ಸು ಹೇಳಿದೆ.
ಮುಂದಿನ ಭಾಗಗಳ ನಿರೀಕ್ಷೆಯಲ್ಲಿ,
ನಿಮ್ಮವ
ಬೆಳ್ಳೂರ್Anonymousnoreply@blogger.com