Friday, August 05, 2005

Sampada | Sampada

Sampada | Sampada

ಕನ್ನಡದಲ್ಲಿ ಈ ರೀತಿಯ ತಾಣ ಎಂದಾದರೂ ಕಾಣಸಿಗುವುದೇ ಎಂದು ಹಾತೊರೆಯುತ್ತಿದ್ದೆ. ಹರಿಪ್ರಸಾದ್ ನಾಡಿಗ್ (ಮತ್ತು ಸಂಗಡಿಗರು?) ಒಳ್ಳೆಯ ಕೆಲಸವನ್ನೇ ಮಾಡಿದ್ದಾರೆ. ನಾನೂ ಒಬ್ಬ ಸದಸ್ಯನಾಗಿದ್ದೇನೆ ಈಗ. ಕನ್ನಡಪ್ರೇಮಿಗಳೆಲ್ಲರೂ ಇಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಲೇಬೇಕು.

ಹಿತವಾಗಿ, ಕಣ್ಣಿಗೆ ಹೊಡೆಯದ ರೀತಿಯಲ್ಲಿ ಪುಟದ ವಿನ್ಯಾಸ ಮಾಡಿದ್ದಾರೆ.

ನನಗೆ ಅತ್ಯಂತ ಸಂತೋಷವಾಗುತ್ತಿರುವುದು ನಮ್ಮ ಕನ್ನಡಿಗರೊಡನೆ ಕನ್ನಡದಲ್ಲಿ ಚರ್ಚೆ ಮಾಡುವುದರಿಂದ. ಬೇರೆಡೆಗಳಲ್ಲಿ ಇಂಗ್ಲೀಷಿಗೇ ಮೊರೆ ಹೋಗಬೇಕಿತ್ತು. ಇಲ್ಲಿ ಹಾಗಲ್ಲ. ಅಂತೂ ಕನ್ನಡ ತಾಯಿ ಕನ್ನಡಿಗರ ಕಣ್ತೆರೆಸಿದ್ದಾಳೆ.

ಏನು ಮಾಡದೇ ಇದ್ದಲ್ಲಿ ಕನ್ನಡ ಬೇಗನೆ ನಾಶವಾಗುವುದು ಎಂದು ಒಬ್ಬರು ವಿಶಾದದೊಂದಿಗೆ ಎಚ್ಚರಿಸಿದ್ದರು. ಸಂಪದದಂಥ ಪ್ರಯತ್ನಗಳು ಆ ಮಾತನ್ನು ಸುಳ್ಳುಮಾಡಲು ಹೊರಟಿವೆ. ಆ ನಾಶದ ಮಾತು ಸುಳ್ಳಾಗಲಿ. ಸಂಪದ ಕನ್ನಡದೊಂದಿಗೆ ಉಳಿಯಲಿ. ಉಳಿದು ಬಾಳಲಿ. ಬಾಳಿ ಬೆಳೆಯಲಿ. ಬೆಳೆದು ಹೆಮ್ಮರವಾಗಿ ಕನ್ನಡಿಗರೆಂಬ ಹಕ್ಕಿಗಳ ಕನ್ನಡತನಕ್ಕೆ ಆಶ್ರಯ ನೀಡಲಿ.

3 comments:

Anonymous said...

ಧನ್ಯವಾದಗಳು. ಸಂಪದದಲ್ಲಿ ಇತ್ತೀಚೆಗೆ ನೀವು ಕಾಣಸಿಗಲಿಲ್ಲ. ಬಿಡುವಿಲ್ಲದಷ್ಟು ಕೆಲಸವೆ? :)

Anonymous said...

Dear Nilagriva,

Can you please tell me how to write blog in Kannada in blogspot?

Thanks,
Suresh

nIlagrIva said...

ಕನ್ನಡದಲ್ಲಿ ಬ್ಲಾಗ್ ಮಾಡುವುದು ಬಹಳ ಸುಲಭ. ನಿಮ್ಮ ಬಳಿ ಬರಹ ತಂತ್ರಾಂಶ ಇದ್ದರೆ ಅದರ baraha-direct ತಂತ್ರವನ್ನು ಉಪಯೋಗಿಸಿ ಬರೆಯಬಹುದು. ಈಗ ಬ್ಲಾಗರ್ ನ ಕಿಟಕಿಯೊಂದನ್ನು ತೆಗೆದಿಡಿ. ಬರಹ-ಡೈರೆಕ್ಟ್ ಮೇಲೆ ಕ್ಲಿಕ್ಕಿಸಿ. ಅದರಲ್ಲಿ (ಅದರ UI ನಲ್ಲಿ) ಕನ್ನಡಕ್ಕೆ ಸರಿಯಾದ (ಯೂನಿಕೋಡ್ ಎಂದು ಮಾಡಬೇಕು) ಆಯ್ಕೆ ಮಾಡಿದರೆ ನೀವು ಎಲ್ಲಾದರೂ ಬರಹವನ್ನುಪಯೋಗಿಸಿ ಬ್ಲಾಗಿಸಬಹುದು. ನಿಮಗೆ ಸಂಪದದಲ್ಲಿ ಕನ್ನಡದಲ್ಲಿ ಬರೆಯಲು ಸಾಧ್ಯವಾದರೆ ಬ್ಲಾಗ್-ಸ್ಪಾಟ್ ನಲ್ಲಿಯೂ ಬರೆಯಬಹುದು. ಸಂಪದದಲ್ಲಿ ಒಂದು FAQನಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿ ಸಿಗಬಹುದೆಂದು ಊಹಿಸಿದ್ದೇನೆ. ಅಥವಾ baraha.com ನಲ್ಲಿ ಕೂಡ ಉತ್ತರ ದೊರೆಯಬಹುದು.

ನಿಮ್ಮ ಮುಂದಿನ ಉತ್ತರ ಕನ್ನಡ ಭಾಷೆ-ಲಿಪಿಗಳಲ್ಲಿ ಬರಲಿ.