Friday, October 14, 2005

ಯೋಗಾಚಾರ್ಯರ ಅಮೇರಿಕಾಯಾತ್ರೆ

Yoga's Great Teacher Draws Crowds on Final U.S. Tour - New York Times

ಮೇಲಿನ ಕೊಂಡಿಯನ್ನು ನೀವು ಕ್ಲಿಕ್ಕಿಸಿದರೆ ಬೆಂಗಳೂರಿನ ಬಳಿಯ ಬೆಳ್ಳೂರಿನವರಾದ ಬಿ.ಕೆ.ಎಸ್.ಅಯ್ಯಂಗಾರ್ಯರ ಬಗ್ಗೆ ಇರುವ ನ್ಯೂಯಾರ್ಕ್ ಟೈಮ್ಸ್ ನ ಲೇಖನವನ್ನೋದಬಹುದು. ಅಯ್ಯಂಗಾರ್ಯರ ಹೆಸರು ಯೋಗಾಭ್ಯಾಸಿಗಳಿಗೆ ಮಾತ್ರವಲ್ಲ, ಯೋಗದ ಹೆಸರು ಕೇಳಿದ್ದವರಿಗೂ ಚಿರಪರಿಚಿತ. ಅವರ "ಯೋಗದೀಪಿಕೆ" (ಕನ್ನಡದಲ್ಲಿನ ಅನುವಾದ) ಬಹಳ ಒಳ್ಳೆಯ ಗ್ರಂಥ. (ನಮ್ಮ ಮನೆಯಲ್ಲಿದೆ. ನಾನು ಓದಿದ್ದೇನೆ. ಮಾಡಿ ನೋಡಿಲ್ಲ). ಅವರ ಗ್ರಂಥಗಳು ವಿಶ್ವವಿಖ್ಯಾತವಾದುವು.

ಎಂಭತ್ತಾರು ವರ್ಷದ ಜ್ಞಾನವೃದ್ಧರಾದ ಇವರು ಹಲವು ಯುವಕರನ್ನು ನಾಚಿಸುವಂಥ ದೇಹಪಟುತ್ವವನ್ನು ಇನ್ನೂ ಉಳ್ಳವರು. ಯೋಗದ ಶಕ್ತಿ ಮತ್ತು ಮಹತ್ತ್ವಗಳ ಜೀವಂತ ಉದಾಹರಣೆಯೆಂದರೆ ಶ್ರೀ ಅಯ್ಯಂಗಾರ್ಯರೇ. ಇವರ ಅನುಯಾಯಿವರ್ಗ ಪ್ರಪಂಚದ ಪ್ರಮುಖರಿಂದ ಕೂಡಿದೆ. ಖ್ಯಾತ ವಯೊಲಿನ್ ವಾದಕರಾಗಿದ್ದ ಯಹೂದಿ ಮೆನೂಹಿನ್ ಅವರಿಗೂ ಇವರೇ ಯೋಗಾಚಾರ್ಯರು. ಈಗಲೂ ಫ್ಯಾಶನ್ ಪ್ರಪಂಚದ ಪ್ರಮುಖರು, ಸಿನಿಮಾ ತಾರೆಯರು ಇವರ ಶಿಷ್ಯರೆಂದು ತಮ್ಮನ್ನು ಏಣಿಸಿಕೊಳ್ಳುತ್ತಾರೆ.

ಕಳೆದ ಹನ್ನೆರಡು ವರ್ಷಗಳಲ್ಲಿ ಮಾನ್ಯರ ಮೊದಲನೆಯ ಅಮೇರಿಕಾ ಯಾತ್ರೆ ಅವರ ಕೊನೆಯ ಅಮೇರಿಕಾಯಾತ್ರೆಯೂ ಆಗಿದೆ ಎಂದು ಪತ್ರಿಕೆಯ ವರದಿ ತಿಳಿಸುತ್ತದೆ.

ಹೆಚ್ಚಿನ್ನೇನು ಹೇಳಲಾರೆ. ಲೇಖನ ಓದಿ ನೋಡಿ. ಚೆನ್ನಾಗಿದೆ.

ಇಂಥವರು ಕನ್ನಡಿಗರು, ನಮ್ಮವರು ಎನ್ನುವುದು ಹೆಮ್ಮಯ ವಿಷಯವಲ್ಲವೇ?

No comments: