Monday, October 09, 2006

ನಮ್ಮ ಜನರು: ಜಿಪುಣರು ಮತ್ತು ಆತುರಗಾರರು

ನನಗೆ ಮನೆಯಲ್ಲಿದ್ದರೆ ಚೆನ್ನ. ಆಫೀಸಿನಲ್ಲಿದ್ದರೂ ಚೆನ್ನ. ಇವೆರಡರ ನಡುವೆ ಇರುವ ನಗರವೂ ರಸ್ತೆಗಳೂ ಚೆನ್ನ. ಆದರೆ ನಗರದ ಮೂಲಕ ಆ ವಾಹನಗಳ ಮತ್ತು ಜನಗಳ ಜಂಗುಳಿಯಲ್ಲಿ ಸಾಗುವುದು ಚೆನ್ನಾಗಿಲ್ಲ. ಸ್ವಲ್ಪವೂ ಚೆನ್ನಾಗಿಲ್ಲ. ಇನ್ನೂ ಹೇಳಬೇಕಾದರೆ ಬಹಳ ಕಷ್ಟ ಎಂದೇ ಹೇಳಬೇಕು. ಈ ಟ್ರಾಫಿಕ್ ಎಂಬ ಪೆಡಂಭೂತ ಎಲ್ಲವನ್ನೂ ಕಷ್ಟ ಮಾಡಿದ್ದಾನೆ. ಇದಕ್ಕೆ ಒಂದು ರೀತಿಯಲ್ಲಿ - ಒಂದು ಸಣ್ಣ ಪ್ರಮಾಣದಲ್ಲಿ ನಾನೂ ಜವಾಬ್ದಾರ. ಏಕೆಂದರೆ ಈ ಟ್ರಾಫಿಕ್ ಭೂತದ ಒಂದು ಅಣುವಾದರೂ ಆಗಿರುತ್ತೇನೆ.

ಅಮೇರಿಕೆಯಲ್ಲಿ ಇಲ್ಲಿಗಿಂತ ಹೆಚ್ಚು ವಾಹನಗಳೇ. ಬಹಳಷ್ಟು ನಾಲ್ಕು ಚಕ್ರದವುಗಳೇ. ಆದರೆ ಅಲ್ಲಿನ ಶಿಸ್ತು ಎಂಥ "ಜ್ಯಾಮ್" ಬಂದರೂ ತಡೆದುಕೊಳ್ಳುವ ಹಾಗೆ ಮಾಡುತ್ತದೆ. ನಮ್ಮ ಬೆಂಗಳೂರೋ! ಬಿಡಿ! ಇಲ್ಲಿ ಎಲ್ಲ ರೀತಿಯ ವಾಹನಗಳು. ಒಂದು ಚಕ್ರದ ವಾಹನದಿಂದ ಹತ್ತಿಪ್ಪತ್ತು ಚಕ್ರಗಳ ವಾಹನಗಳ ವರೆಗೆ. ಎತ್ತಿನ ಗಾಡಿಯ ಮರದ ಚಕ್ರಗಳಿಂದ ರೋಡ್ ರೋಲರಿನ ಲೋಹದ ಚಕ್ರಗಳ ವರೆಗೆ. ಇವೆರಡರ ನಡುವೆ ಅಸಂಖ್ಯಾತ ರಬ್ಬರಿನ ಚಕ್ರಗಳು. ವಿಶೇಷವೇನೆಂದರೆ ಈ ಎಲ್ಲ ಚಕ್ರಗಳು ಒಂದೇ ರಸ್ತೆಯಲ್ಲೇ ಓಡಾಡುತ್ತವೆ! ವಿವಿಧಭಾರತಿಯ ಹಾಡಿನ ಹಾಗೆ "ವಿವಿಧ ಗತಿ, ಏಕ ಶ್ರುತಿ" ನಮ್ಮ ವಾಹನಗಳವು. ಒಟ್ಟಿಗೆ ಓಡಾಡಲು ಸಾಧ್ಯವಿಲ್ಲವೇ? ಅಸಾಧ್ಯವಲ್ಲದ್ದು ಏನೂ ಇಲ್ಲ. ಆದರೆ ನಮ್ಮ ಜನರನ್ನು ಬಿಟ್ಟರೆ ಸುಲಭಸಾಧ್ಯವಾದದನ್ನೂ ಅಸಾಧ್ಯ ಮಾಡಿಬಿಡುತ್ತಾರೆ.

ಇಲ್ಲಿ ನೆನಪಿಗೆ ಬರುವ ಒಂದು ಜೋಕನ್ನು ಹೇಳಬೇಕು. ಸಾಕಷ್ಟು ಜನಪ್ರಿಯವೇ ಎಂದು ಹೇಳಬೇಕು. ಕಷ್ಟ ಪಟ್ಟು ಟೈಪಿಸಿದ್ದೇನೆಂದು ಇನ್ನೊಮ್ಮೆ ಓದಿಬಿಡಿ. ಪರವಾ ಇಲ್ಲ. ಒಂದು ಲ್ಯಾಬಿನಲ್ಲಿ ಬೇರೆ ಬೇರೆ ಜಾಡಿಗಳಲ್ಲಿ ಬೇರೆ ಬೇರೆ ದೇಶಗಳ ಕಪ್ಪೆಗಳನ್ನಿಟ್ಟಿದ್ದರಂತೆ. ಪ್ರತಿಯೊಂದು ಜಾಡಿಯ ಮೇಲೂ ಮುಚ್ಚಳವಿತ್ತಂತೆ. ಆದರೆ ಇಂಡಿಯ ದೇಶದ ಕಪ್ಪೆಗಳಿಗೆ ಮುಚ್ಚಳವೇ ಇರಲಿಲ್ಲವಂತೆ. ಏಕೆ ಎಂದು ಕೇಳಿದಾಗ ಬಂದ ಉತ್ತರ ಈಗ ಸರ್ವವಿದಿತ. ಒಂದು ಕಪ್ಪೆ ಪರಾರಿಯಾಗಲು ಯತ್ನಿಸಿದಾಗ ಮತ್ತೊಂದು ಕಪ್ಪೆ ಅದನ್ನು ಕೆಳಗೆಳೆದು ತಾನು ಮೇಲೆ ಹೋಗಲು ಯತ್ನಿಸುವುದು. ಅದನ್ನು ಮಗುದೊಂದು ಕೆಳಗೆಳೆಯುವುದು. ಹೀಗೆ ನಮ್ಮ ದೇಶದ ಶೋಚನೀಯ ಪರಿಸ್ಥಿತಿಯ ಬಗ್ಗೆ ನಾವು ಜೋಕ್ ಮಾಡಿ ವಿಷಾದದ ನಗೆ ನಗುವ ಹಾಗೆ ಆಗಿದೆ ಎಂಬುದೇ ಶೋಚನೀಯ.

ಇದಿರಲಿ. ಈ ಜೋಕನ್ನು ಕೇಳಿ ನಾವೆಲ್ಲರೂ ಒಬ್ಬ ದಾರ್ಶನಿಕನ ತಿಳಿವಳಿಕೆಯ ನಗುವನ್ನು ನಗುವವರೇ. ಆದರೆ ನಾವು ಈ ಕಪ್ಪೆಗಳಲ್ಲಿ ಕಪ್ಪೆಗಳಲ್ಲವೇ? ನನ್ನ ಪ್ರಕಾರ ಹೌದು. ಈ ಕಾಲೆಳೆಯುವ "ಕಪ್ಪೆತನ" ನಮ್ಮನ್ನು ಸದಾಕಾಲವಲ್ಲದಿದ್ದರೂ ಆಗಾಗ ಆವರಿಸಿಕೊಳ್ಳುತ್ತದೆ. ಆ ತಾತ್ಕಾಲಿಕ ಕಪ್ಪೆತನೆ ಈ ಟ್ರಾಪಿಕ್ ಭೂತಕ್ಕೂ ಕಾರಣ ಎಂದರೆ ಅಚ್ಚರಿ ಪಡಬೇಕಾದದ್ದೇನೂ ಇಲ್ಲ.

ಈಗ ರಸ್ತೆಯಲ್ಲಿ ಬಹಳಷ್ಟು ವಾಹನಗಳು ಸಂಚರಿಸುತ್ತಿವೆ ಎಂದಿಟ್ಟುಕೊಳ್ಳೋಣ. ಯಾವನೋ ಒಬ್ಬ ಕಾರಿನವ ಅಥವಾ ಒಬ್ಬ ಆಟೋದವ ಅಥವ ಒಬ್ಬ ಬೈಕಿನವ ಮಾಡುವ ಅಚಾತುರ್ಯದಿಂದ ನೂರಾರು ಜನರು ಹತ್ತಿಪ್ಪತ್ತು ನಿಮಿಷಗಳ ಅಮೂಲ್ಯವಾದ ಸಮಯ ಕಳೆದುಕೊಳ್ಳುತ್ತಾರೆ. ಇದರಿಂದ ಪಿರಿಪಿರಿಯಾಗುವುದಂತೂ ಆಗುವುದು. ಜೊತೆಗೆ ಎಲ್ಲರಿಗೂ ವಿಳಂಬ. ಅದರಿಂದ ಮತ್ತಷ್ಟು ಕಿರಿಕಿರಿ. ದೇಶಕ್ಕೇ ಹಾನಿಯೆಂದರೂ ಉತ್ಪ್ರೇಕ್ಷೆಯಲ್ಲ.

ಆ ಅಚಾತುರ್ಯದ ರೀತಿ ಹೇಗಿರುತ್ತದೆಯೆಂಬುದು ನಮಗೆಲ್ಲ ತಿಳಿದ ವಿಷಯವೇ! ಒಬ್ಬ ಆಟೋದವ ಹಠಾತ್ತನೆ ಎಡಕ್ಕೆ ಒಬ್ಬ ಕಾರಿನವನ ಮುಂದೆ ಬರುತ್ತಾನೆ. ಹೀಗೆ ಬರುವುದಕ್ಕೆ ಆ ಆಟೋದವನಿಗೆ ಮತ್ತೇನೋ ಕಾರಣವಿರುತ್ತದೆ. ಅದನ್ನು ಬಿಡಿ. ಹೀಗೆ ಹಠಾತ್ತನೆ ಮುಂದೆ ಬಂದಾಗ ಆ ಕಾರಿನವನು ಜಾಗರೂಕನಾಗಿದ್ದರೆ ಸರಿ. ಇಲ್ಲದಿದ್ದರೆ ಸ್ವಲ್ಪ ತಾಕಿ ಗಾಡಿಗಳಿಗೆ ಪೆಟ್ಟಾಗುತ್ತದೆ. ಆಟೋದವರು (ಎಲ್ಲರೂ ಅಲ್ಲ, ಆದರೆ ನಾನು ನೋಡಿದ ಬಹಳ ಮಂದಿ) ಜಗಳಗಂಟರೆಂದೇ ಹೇಳಬೇಕು. ಚಕ್ಕನೆ ಗಾಡಿಯಿಂದ ನೆಗೆದು ಅವಾಚ್ಯ ಶಬ್ದಗಳಿಂದ ಕಾರಿನವನನ್ನು ಬೈಯುತ್ತಾನೆ. ಕಾರಿನವನು ಭಯಸ್ಥನಾಗಿದ್ದರೆ ವಾಕ್ಪ್ರವಾಹ ಏಕಮುಖಿಯಾಗಿರುತ್ತದೆ. ಕಾರಿನವನಿಗೂ ಸ್ವಲ್ಪ ಕೈಕೆರೆದಿದ್ದರೆ ಅವನು ಇಳಿದು ಈ ಕಡೆಯಿಂದ ವಾಕ್ಪ್ರಹಾರ ಮಾಡುತ್ತಾನೆ. ಇಷ್ಟು ಹೊತ್ತಿಗೆ ಅವರ ಹಿಂದೆ ಇರುವ ವಾಹನಗಳಿಂದ ಶಂಖನಾದವೇರಿ ಇವರಿಬ್ಬರ ವಾಗ್ಯುದ್ಧಕ್ಕೆ ಮತ್ತಷ್ಟು ಪ್ರೇರಣೆ ಕೊಡುತ್ತದೆ. ಇದರ ಜೊತೆಗೆ ಅವರ ಹಿಂದೆ ಬಂದ ವಾಹನಗಳಿಗೆ ಸ್ಥಳವಿಲ್ಲದೆ ಮಹಾವಾಹನಸಂದಣಿ ಅಲ್ಲಿ ಸೇರುತ್ತದೆ. ಚಾಲಕರಿಬ್ಬರೂ ರಾಜಿಯಾಗಿ ದುಡ್ಡಿನ ಆದಾನಪ್ರದಾನವಾದ ಮೇಲೆ ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ. ಆದರೆ ಆ ಹೊತ್ತಿಗೆ ಅನೇಕರಿಗೆ ಇಪ್ಪತ್ತು-ಇಪ್ಪತ್ತೈದು ನಿಮಿಷ ಹೋಗಿಬಿಟ್ಟಿರುತ್ತದೆ.

ಜಗಳ ನಡೆಯಬೇಕಾದರೆ ರಸ್ತೆಯೆಲ್ಲವನ್ನೂ ಅವರು ಆಕ್ರಮಿಸಿಕೊಂಡಿರುವುದಿಲ್ಲ. ಒಂದೆರಡು ಗಾಡಿ ಹೋಗಲು ಜಾಗ ಇದ್ದೇ ಇರುತ್ತದೆ. ಆದರೆ ನಮ್ಮ ಜನರಲ್ಲಿ ಕೆಲವರು ಆ ಜಾಗದಲ್ಲಿ ನಾ ಮುಂದು ತಾ ಮುಂದು ಎಂದು ನುಗ್ಗಿದಾಗಲೇ ತೊಂದರೆ ಆರಂಭವಾಗುವುದು. ನಾನು ಜಗಳವಾಡುವವರ ಬಗ್ಗೆಯಲ್ಲ ಮಾತನಾಡಲು ಹೊರಟದ್ದು. ಈ ಬಿಟ್ಟ ಜಾಗದಲ್ಲಿ ನುಗ್ಗಲು ಯತ್ನಿಸುತ್ತಾರಲ್ಲಾ ಅವರ ಬಗ್ಗೆ. ಸಾಮಾನ್ಯವಾಗಿ ಒಳ್ಳೆಯವರಾಗಿಯೇ ಇರುವ ಇವರು (ಇವರನ್ನು ಮನೆಗಳಿಗೆ ಹೋಗಿ ನೋಡಿ - ಒಂದು ಲೋಟ ಕಾಫಿಯ ಆತಿಥ್ಯವನ್ನಂತೂ ಮಾಡಿಯೇ ತೀರುತ್ತಾರೆ) ಹೀಗೆ ಹೊರಗೆ ವಾಹನಾರೂಢರಾಗಿ ತಲೆಯೇ ಕೆಟ್ಟವರ ಹಾಗೆ ಆಡುತ್ತಾರೆ. ಆಗ ಬರುವ ಇವರ ಯೋಚನೆ ಸ್ವಲ್ಪ ನೋಡಿ. ಆ ರಸ್ತೆಯಲ್ಲಿರುವ ಸ್ವಲ್ಪ ಜಾಗದ ಮೂಲಕ ಹಾದು ಹೋದರೆ ದೊಡ್ಡ ರಸ್ತೆಯಿರುತ್ತದೆ. ಅದರಲ್ಲಿ ಬೇಗ ಪ್ರಯಾಣಿಸಿ ತಮ್ಮ ಜಾಗವನ್ನು ಬೇಗೆ ಸೇರಬಹುದು. ಇವರು ಮಾತ್ರ ದಾಟಿದರೆ ಸಾಕು. ಪಕ್ಕದ ಗಾಡಿಯವ ಹಾಳಾದರೆ ಹೋಗಲಿ. ಸಾಮಾನ್ಯವಾಗಿರುವ ಸೌಜನ್ಯ ಇವರನ್ನು ಅ ಕ್ಷಣದಲ್ಲಿ ಬಿಟ್ಟು ಹೋಗುತ್ತದೆ. ನುಗ್ಗಬೇಕು, ನುಗ್ಗಿ ಮುಂದೆ ಹೋಗಬೇಕು. ಅಷ್ಟು ಮಾಡಿದರೆ ಸಾಕು! ಒಂದು ಐದು ಸೆಕೆಂಡ್ ಯೋಚನೆ ಮಾಡಿದರೂ ಈ ನಿರ್ಧಾರಕ್ಕೆ ಅವರು ಬರುವುದಿಲ - ಅವರು ಸ್ವಾಭಾವಿಕವಾಗಿ ಅಷ್ಟು ಒಳ್ಳೆಯವರೇ ಇರುತ್ತಾರೆ. ಆದರೆ ವಾಹನಗಳ ಮೇಲೆ ಅಥವಾ ಒಳಗೆ ಕುಳಿತ ಜನರ ವಿವೇಕವೂ ಸೌಜನ್ಯವನ್ನು ಕೂಡಿ ಮಾಯವಾಗಿರುತ್ತದೆ.

ಈ ರೀತಿಯ ವರ್ತನೆಗಳು ತಿಂಗಳಿಗೊಮ್ಮೆಯಾದರೆ ಪರವಾ ಇಲ್ಲ. ಆದರೆ ನಿತ್ಯವೂ ಇದೇ ರಗಳೆಯೇ? ಈ ರೀತಿ ಮಾಡುವವರನ್ನು ಒಂದು ಪ್ರಶ್ನೆ ಕೇಳಲೇ ಬೇಕು. ಈ ರೀತಿ ಆತುರದಿಂದ ನುಗ್ಗಿ ಹೊರಟು ಅವರ ಜಾಗವನ್ನು ಐದು ನಿಮಿಷ ಮುಂಚಿತವಾಗಿಯೇ ಸೇರಿದರು ಎಂದಿಟ್ಟುಕೊಳ್ಳೋಣ. ಆ ಐದು ನಿಮಿಷಗಳಲ್ಲಿ ಎಂಥ ಘನಕಾರ್ಯ ಮಾಡಬಹುದು? ಐದು ನಿಮಿಷಗಳು ಅಮೂಲ್ಯವಾದ ಸಮಯವೇನೋ ಹೌದು. ಆದರೆ, ಇಂಥ ಸಮಯ ಪ್ರಜ್ಞೆಯ ಜನರೇ ಇವರಾಗಿದ್ದರೆ ನಮ್ಮ ದೇಶ ಇನ್ನೂ ಮುಂದೆ ಇರುತ್ತಿರಲಿಲ್ಲವೇ?

ಆ ಕ್ಷಣದಲ್ಲಿ ಮಾತ್ರ ಇವರ ಸಮಯಪ್ರಜ್ಞೆ ಜಾಗೃತವಾಗುವುದು ಸೋಜಿಗದ ವಿಷಯವೇ ಸರಿ. ಅವರ ಐದು ಸೆಕೆಂಡಿನ ಸಮಯವನ್ನು ಯೋಚನೆಮಾಡಿ ಸರಿಯಾಗಿ ವರ್ತಿಸಿ ಜ್ಯಾಮನ್ನು ನಿವಾರಿಸುವ ಮೂಲಕ ಬೇರೆಯವರಿಗೆ ಕೊಟ್ಟಿದ್ದರೆ ಅವರಿಗೆ ಸಮಯದ ಜೊತೆ ಒಳ್ಳೆಯ ಕೆಲಸ ಮಾಡಿದ ಸಂತೋಷವೂ ಸಿಗುತ್ತಿರಲಿಲ್ಲವೇ? ಆದರೆ ಪಾಪ! ಒಬ್ಬೊಬ್ಬರೇ ಮಾಡಿದರೆ ತಮಗೇ ಕಷ್ಟ ತಂದುಕೊಳ್ಳುತ್ತಾರೆ ಅಷ್ಟೆ. ಎಲ್ಲರೂ ಹೀಗೆ ತಮ್ಮ ಆ ಅಮೂಲ್ಯವಾದ ಐದು ಸೆಕೆಂಡಿನ ಅವಧಿಯನ್ನು ದಾನ ಮಾಡಿದರೆ - ಇಷ್ಟು ಭಾರೀ ಟ್ರಾಫಿಕ್ ಕೂಡ ತಡೆದುಕೊಳ್ಳುವ ಹಾಗಿರುತ್ತದೆ. ಆದರೆ ನಮ್ಮವರು ಆತುರಗಾರರು ಮತ್ತು ತಮ್ಮ ಕಿಂಚಿತ್ ಸಮಯವನ್ನು ಮತ್ತೊಬ್ಬರಿಗೆ ನೀಡಲು ಮನಸ್ಸು ಬಾರದ ಜಿಪುಣರು.

ಈ ಆತುರ-ಜಿಪುಣತೆಗಳು ತೊಲಗಿದರೆ ನಮ್ಮೆಲ್ಲರ ನಗರ ಸಂಚಾರ ಬಹಳಷ್ಟು ಸುಲಭವಾಗುವುದು ಎಂದು ನನ್ನ ನಂಬಿಕೆ. ನೀವೇನನ್ನುತ್ತೀರಿ?

5 comments:

December Stud said...

Sure, I agree with almost all the points. But, just one comment.

The traffic situation may not be as bad in West (read US of A). But, whenever there are jams, you invariably end up seeing quite a handful of drivers who believe they own the road and actually drive on the right side shoulders. That is essentially your dear old Bangalorean trying to squeeze in. The same guy in US of A.

So, it really is the innate human tendency which makes people do the things which you mentioned. Not all, but atleast a handful of people have the inclination to that and as you have rightly pointed out, that makes the jam worse.

nIlagrIva said...

December Stud,
I agree with you that it is an innate human tendency. But in the US because of superior road conditions, people don't have to be so pushy all the time. For example, I am sure you (as a car driver) have stopped many times for pedestrians to cross the road. How many people do that in India? But a vehicle driver can't do that in India because he kind of knows that if he allows one pedestrian, others will barge in and won't wait for him to pass anymore. In other words, since people easily transgress one's generosity, it is better to be otherwise for one's own well-being (for most people in India).

Since we have bad roads in India, we have to rely more on the generosity of the drivers than anything else to brave traffic jams. On the whole, traffic jams are tolerable in Bangalore - but then you do have those nutcases (as at every other place), right?

My point here basically is - though the innate human behavior to stay ahead at all costs is universal, some affluence can bring about some generosity (not always, unfortunately). This affluence (such as good roads in the US), causes for example, the motorists there to be considerate towards other people there. Since in India, roads are not so well laid out, you have even otherwise normal people doing sneaky stuff without any regard for other people. The same Indians driving in the US would be at least as good as their co-drivers in terms of adherence to rules of the road and general courtesy to other drivers.

So, people in India, IMHO, *have* to be more considerate than other motorists in the world because you need that to make up for bad roads.

I guess I've made an about turn in my opinion as I was typing out my response. But that also may be just because I drove just before writing the original piece and I didn't drive today ;)!

bellur said...

dear nilagriva,
this post is worth getting published in a newspaper or magazine. that way, it would benefit most riders and readers.

congratulations for writing this excellent post.

btw, you have been tagged. for details, please visit my blog.

Vijay said...

Excellent post.. especially taking into view the horrendous accident we had in Bangalore yesterday.


Well written.

Anonymous said...

This kind of Bangaloreans' behavior is explained in the book Games Indians Play - Why we are the way we are by Mr. Raghunathan. An example of how great men think alike.