Thursday, June 14, 2007

ನೆನಪು: ಪಿ. ಸುಶೀಲಾ ಅವರ ಮಧುರ ಗೀತೆಗಳು

ಚಿಕ್ಕಂದಿನಿಂದಲೂ ನನಗೆ ಕನ್ನಡ ಚಿತ್ರಗೀತೆಗಳ ಬಗ್ಗೆ ಹೆಚ್ಚಿನ ಒಲವು. ನಮ್ಮ ತಾಯಿಗೆ ಹಿಂದಿ ಚಿತ್ರಗೀತೆಗಳ ಗೀಳಿದ್ದರೆ ನಮ್ಮ ತಂದೆಯವರು ಇದು ಯಾವುದಕ್ಕೂ ಲಿಪ್ತರೇ ಅಲ್ಲ. ಬೆಳಗಾಗೆದ್ದು ರೇಡಿಯೋ ತಿರುಗಿಸಿದಾಗ ಹಲವು ಹಿನ್ನೆಲೆದನಿಗಳ ಹಲವು ಹಾಡುಗಳು. ಸಾಮಾನ್ಯವಾಗಿ ಕೇಳಿಸುತ್ತಿದ್ದ ಹೆಸರುಗಳು - ಪಿ.ಬಿ.ಶ್ರೀನಿವಾಸ್, ಡಾ|| ರಾಜಕುಮಾರ್, ಎಸ್.ಪಿ.ಬಾಲಸುಬ್ರಹ್ಮಣ್ಯಂ. ಸ್ತ್ರೀದನಿಗಳ ಹೆಸರುಗಳು - ಪಿ.ಸುಶೀಲಾ ಮತ್ತು ಎಸ್.ಜಾನಕಿ. ಈ ಎಲ್ಲ ಹಾಡುಗಾರರದೂ ಅವರವರುಗಳದೇ ಆದ ವಿಶಿಷ್ಟ ಬಗೆಗಳು. ನನಗೆ ಆಗ ಸುಶೀಲಾ ಅವರ ಧ್ವನಿ ಹೆಚ್ಚು ರುಚಿಸುತ್ತಿರಲಿಲ್ಲ. ಜಾನಕಿಯವರೇ ನನಗೆ ಹೆಚ್ಚು ಇಂಪಾಗಿ ಕೇಳುತ್ತಿದ್ದರು.

ಸುಶೀಲಾ ಆವರ ಧ್ವನಿಯಲ್ಲಿ ಮೂಗಿನದು ಸ್ವಲ್ಪ ಹೆಚ್ಚಿನ ಪಾತ್ರವಿರುತ್ತಿದುದು ನನಗೆ ಕೇಳಿಸುತ್ತಿದ್ದ ಮೊದಲ ಸಂಗತಿ. ಅದು ಅವರ ಧ್ವನಿಯ, ಹಾಡುಗಾರಿಕೆಯ ಇತರ ಸಂಗತಿಗಳನ್ನು ನೋಡದಿರುವಷ್ಟು ನನ್ನನ್ನು ಆವರಿಸಿಬಿಟ್ಟಿತ್ತು. ಜಾನಕಿಯವರದೋ ಒಳ್ಳೆಯ ಕಂಠಸಿರಿ. ಮೂಗಿನ ನಂಟು ಸ್ವಲ್ಪ ಕಡಿಮೆ. ಅದರ ಜೊತೆಗೆ ಆ ಕಾಲಕ್ಕೆ ಹೆಚ್ಚಿನ ಚಾಲ್ತಿಯಲ್ಲಿದ್ದ ಗಾಯಕಿ ಜಾನಕಿಯವರೇ. ಸುಶೀಲಾ ಅವರು ಹಿಂದಕ್ಕೆ ಸರಿದಿದ್ದ ಕಾಲ. ಆದ್ದರಿಂದ ಅವರ ಧ್ವನಿಯೇ ನನಗೆ ಹೆಚ್ಚು ರುಚಿಸುತ್ತಿತ್ತು.

ಆದರೆ ಒಂದೆರಡು ವರ್ಷಗಳ ಹಿಂದೆ ಹೀಗೆ ನಾನು ಆಗಾಗ ಮಾಡುವ ಗಾನವಿಹಾರದಲ್ಲಿ ಸುಶೀಲಾ ಅವರ ಹಳೆಯ ಹಾಡುಗಳನ್ನು ಮತ್ತೆ ಕೇಳುವ ಅವಕಾಶ ಸಿಕ್ಕಿತು. ಆಗ ನನಗೆ ಆಶ್ಚರ್ಯ ಕಾದಿತ್ತು. ಅಷ್ಟು ಸಮೃದ್ಧಕಂಠಸಿರಿ ಆಕೆಯದು! ಎಂಥಾ ಹಾಡುಗಳು! ಎಂಥ ಭಾವಪೂರ್ಣ ಹಾಡುಗಾರಿಕೆ! ಒಂದು ಸ್ವಲ್ಪವೂ ಫಾಲ್ಸ್-ವಾಯ್ಸ್ ಇಲ್ಲದ ಮಂದ್ರ-ಮಧ್ಯಮ-ತಾರಸ್ಥಾಯಿಗಳಲ್ಲಿ ಸುಲಲಿತವಾಗಿ ವಿಹರಿಸಬಲ್ಲ ಆ ಧ್ವನಿ! ನನಗೆ ಆಗ ದೊಡ್ಡದಾಗಿ ಕಂಡಿದ್ದ "ಮೂಗಿನಿಂದ ಹಾಡುವ" ವಿಚಾರ, ತಾನು ಮಾಡಿದ ಅಪಚಾರವೋ ಎಂಬಂತೆ ತಾನೇ ತಾನಾಗಿ ಬಹಿಷ್ಕ್ಕೃತಗೊಂಡಿತ್ತು. ಅದರ ಸುಳಿವು ಕೂಡ ನನಗೆ ಸಿಲುಕದೇ ಹೋಯಿತು. ಆ ಗಾನಸುಧೆಯಲ್ಲೇ ಮಗ್ನನಾಗಿದ್ದೆ ನಾನು.

ಎಚ್ಚರದ ಸ್ಥಿತಿಗೆ ಮರಳಿದಾಗ ನೆನಪು ಮರುಕಳಿಸಿತು. ಹಿಂದೆ ಮಾಡಿಟ್ಟಿದ್ದ ನಿರ್ಣಯ ನೆನಪಿಗೆ ಬಂದಿತು. ಏಕೆ ಹೀಗೆ ಮಾಡಿದ್ದೆ ಅನ್ನುವ ಜಿಜ್ಞಾಸೆ ನನ್ನನ್ನು ಕೊರೆಯಿತು. ನನ್ನ ಸಂಗೀತದ ಕೇಳ್ಮೆಯ ಮಟ್ಟ ಹೆಚ್ಚಿದೆಯೇ? ತಾಳೆ ಮಾಡಲು ಬೇರೆಯ ಸಂಗೀತ-ರಸಿಕರನ್ನು ಕೇಳಿದಾಗ ಹಲವರಿಗೆ ಸುಶೀಲಾ ಅವರೇ ಹೆಚ್ಚು ಪ್ರಿಯರಾಗಿ ಕಂಡಿದ್ದರು! ಏನಾದರೇನು ? ಇನ್ನೊಂದಷ್ಟು ಸಂಗೀತವನ್ನು ಅಲ್ಪ-ನಿರ್ಣಯವೆಂಬ ಕೆಟ್ಟ ದುರ್ಬೀನಿನಿಂದ ಮುಕ್ತವಾಗಿ ಕೇಳುವ ಹಾಗಾಯ್ತು.

ಹಾಗೆ ನೋಡಿದಾಗ ಸುಶೀಲ ಅವರ ಹಾಡುಗಳು ನನಗೆ ಬರುಬರುತ್ತಾ ಇಷ್ಟವಾಗಿದ್ದವು. ಆ ಗೀತರತ್ನಗಳಲ್ಲಿ ಕೆಲವು -
- ತನುಕರಗದವರಲ್ಲಿ ಪುಷ್ಪವನೊಲ್ಲೆಯಯ್ಯ ನೀನು (ಕಿತ್ತೂರು ಚೆನ್ನಮ್ಮ, ಅಕ್ಕಮಹಾದೇವಿಯವರ ವಚನ)
- ಶರಣೆಂಬೆ ನಾ ಶಶಿಭೂಷಣ (ಮಲ್ಲಮ್ಮನ ಪವಾಡ, ಸದಾಶಿವ ಅವರ ಸಾಹಿತ್ಯ)
- ವಿರಹ ನೂರು ನೂರು ತರಹ (ಎಡಕಲ್ಲು ಗುಡ್ಡದ ಮೇಲೆ,)
- ಲೀಲಾಮಯ ಹೇ ದೇವ (ಪಂಡರೀಬಾಯಿ ಅವರ ನಟನೆಯಿಂದ ಕೂಡಿದೆ. ಚಿತ್ರದ ಹೆಸರನು ನಾ ಅರಿಯೆ)
- ಇದೇನ ಸಭ್ಯತೆ, ಇದೇನ ಸಂಸ್ಕೃತಿ (ಮಣ್ಣಿನ ಮಗ)
- ಹೂವು ಚೆಲುವೆಲ್ಲಾ ನಂದೆಂದಿತು (ಹಣ್ಣೆಲೆ ಚಿಗುರಿದಾಗ)
- ಕಣ್ಣ ನೋಟದಲ್ಲಿ ನೀ ಕಾಡಬೇಡ ಸಾಜ್ನಾ (ಸಿಪಾಯಿ ರಾಮು)
- ಮೆಲ್ಲುಸಿರೇ ಸವಿಗಾನ/ಊಹಲು ಗುಸಗುಸಲಾಡೆ (ವೀರಕೇಸರಿ)
- ಕರ್ಪೂರದ ಗೊಂಬೆ ನಾನು (ನಾಗರಹಾವು)
- ಎಲ್ಲೇ ಇರು, ಹೇಗೇ ಇರು (ಕಸ್ತೂರಿನಿವಾಸ)
- ನೀ ಬಂದು ನಿಂತಾಗ (ಕಸ್ತೂರಿನಿವಾಸ)
- ಅಮರ ಮಧುರ ಪ್ರೇಮ (ರತ್ನಗಿರಿ ರಹಸ್ಯ)
- ಇವ ಯಾವ ಊರಿನ ಮಾವ ಈ ಚೆಲುವ (ಕಾಡು ಕುದುರೆ)
- ಮುದ್ದಿನ ಗಿಣಿಯೆ ಬಾರೋ (ಬೆಳ್ಳಿ ಮೋಡ)
- ಬಾಳೊಂದು ಭಾವ ಗೀತೆ (ನಕ್ಕರೆ ಅದೇ ಸ್ವರ್ಗ)
- ಬಿಳಿಗಿರಿ ರಂಗಯ್ಯ (ಶರಪಂಜರ)

ಆಹಾ !! ಮೇಲಿನ ಪ್ರತಿಯೊಂದು ಹಾಡೂ ಎಷ್ಟು ರಮಣೀಯ!

8 comments:

rk said...

My susheela favs:

Bedagina Henna (Bidugade)
Namma Samsaara (Namma Samsaara)
Cheluvada Muddaada (Baalu Belagithu)
Chinnadanta Naadige (Baala Bandana)
Haarutha Doora Doora (Rani Honnamma)
Ondu Maatu Ondu Maatu Naanu Kelale (Kula Gowrava)
Preetine Aa Dyavaru Tanda (Doorada Betta)
Nee Mudidha Mallige (Gandhi Nagara)
Nannavalu Nannedeya Honnaadanaaluvalu (Swarnamangala)
Tutiya Mele Tunta Kirunage (Mana Mecchida Madadi)
Oduva Nadi Saagarava (Bangaarada Hoovu)
Nudimana Shivaguna (Swarna Gowri)

rk said...

forgot to add:
above songs are my favs apart from what you have listed.

nIlagrIva said...

I like the songs you list also. I found that reading the name of the song and allowing the music and lyrics to run in your mind is a refreshing feeling and sometimes better than even the actual song!

So the song list gives some pleasure that is definitely musical even though there is no "physical music" involved.

I like "nI muDidA mallige" a lot too. But more for PBS than PS.

nIlagrIva said...

And yes, who do you like more? Janaki or PS? Of course, you like both.. but if asked to make a choice?

rk said...

S Janaki anyday!

With her perfect pronounciation in various languages, singing classical songs to romantic songs to folk songs to songs which had her singing like a child, S Janaki was truly a versatile singer who took the audience into a mood of melancholy as she weaved a spell of Swara magic!

nIlagrIva said...

I like S Janaki too. But my initial dislike of P Susheela has disappeared now.

I actually like voices to not be exceedingly thin but have a honey-like consistency. P Susheela has that "correct" thickness of voice. I liked Manjula Gururaj's voice for a similar reason.

Of very recent female Kannada singers, I like Supriya Acharya.

Having said all this, I must admit that S Janaki reigned over Kannada Cinema for a longer time than any other female singer.

Anirudh said...

Great list, but cannot get completed without "Olave jeevana Saakshatkaara" - from Saakshatkaara - Music:M.Ranagarao. Superbly rendered both the Solo and the duet version with PBSrinivas. Almost all her songs for Kalpana and B.Sarojadevi are very good.

Lilamaya he deva - is from "Navajeevana - Rajan Naagendra"
More to the list
Nimma roopa kannali - Chakratheertha - TG.Lingappa
Yendendu Neevu sukhavaagiri - Nyayave Devaru - Rajan Naagendra
Yendendigu Naa ninna - Naaninna Bidalaare - Rajan Naagendra

Infact in 60s it was the PBSrinivas and PSusheela combination which was at the top. Later when more of hindustani music proped into the kannada cinema, we started to get S.Janaki more (in 70s) and the credits mainly goes to Rajan-Nagendra, where S.Janaki gave more melodies.

Both PS and SJ are the gems of Indian Film music.

regards,
Anirudh

Girish Srinivasa Murthy said...

The range of susheela's voice , her tone and pitch can be felt in one beautiful Kannada song
"KaadiruvaLo Krishna Radhe" from the film "Saakshaathkaara".