ನಿನ್ನೆ ಕನ್ನಡ ರಾಜ್ಯೋತ್ಸವ. ಕರ್ನಾಟಕ ಅಥವಾ ಕರ್ಣಾಟಕದ ಏಕೀಕರಣವಾದ ಸಂದರ್ಭವನ್ನು ಸ್ಮರಿಸಲು ಆಯೋಜಿಸಿರುವ ಉತ್ಸವವಿದು. ಕರುನಾಡಿನ ಹೆಗ್ಗುರುತು ಕಸ್ತೂರಿಯ ಕಂಪನ್ನು ಸೂಸುವ ಕನ್ನಡನುಡಿ. ಕನ್ನಡದ ಬಗ್ಗೆ ಈ ಬರೆಹವಿದ್ದರೆ ನಾಡಹಬ್ಬವನ್ನು ಚೆನ್ನಾದ ರೀತಿಯಲ್ಲಿ ಆಚರಿಸಿದ ಹಾಗಾಗುವುದೆಂದು ಬಗೆದು ಇದನ್ನು ಬರೆಯುತ್ತಿದ್ದೇನೆ.
ಸಂಸ್ಕೃತ-ದ್ರಾವಿಡ ಭಾಷಾಧಾತುಗಳ ಹದವಾದ ಮಿಶ್ರಣವೆಂದು ಕನ್ನಡವನ್ನು ಕರೆಯಬಹುದಾದರೂ ಅದಕ್ಕೆ ಮಿಶ್ರಣದಾಚೆಯ ಮಹತ್ತ್ವವಿದೆ. ಸೋಡಿಯಂ ಮತ್ತು ಕ್ಲೋರಿನ್ ಗಳ ಕೂಡಿಕೆಯಿಂದಾದ ಉಪ್ಪು ಮೂಲಧಾತುಗಳ ಗುಣವನ್ನು ಬಿಟ್ಟು ತನ್ನದೇ ಆದ ಗುಣಗಳನ್ನು ಪಡೆಯುವ ಹಾಗೆ ಕನ್ನಡಕ್ಕೆ ಅದರದೇ ಸೊಗಡಿದೆ. ಆದರೆ ಆ ಮೂಲಧಾತುಗಳಿಲ್ಲದೆ ಕನ್ನಡವೂ ಇಲ್ಲವೆಂದು ಎಲ್ಲರೂ ಮನಗಾಣಬೇಕು.
ಕನ್ನಡಕ್ಕೆ ತನ್ನದೇ ಆದ ಕಾವ್ಯಪರಂಪರೆಯಿದೆ, ವ್ಯಾಕರಣಪರಂಪರೆಯಿದೆ. ಇದರ ಬಗ್ಗೆ ಹೆಚ್ಚು ವಿಸ್ತರಿಸದೆ ಈ ವಾರದ ಸುಧಾ ಪತ್ರಿಕೆಯೆಡೆ ಓದುಗರ ಗಮನವನ್ನು ಸೆಳೆಯಬಯಸುತ್ತೇನೆ. ನರಸಿಂಹಮೂರ್ತಿ ಎಂಬ ಲೇಖಕರು ಚೆನ್ನಾಗಿ ಬರೆದಿದ್ದಾರೆ.
ಕನ್ನಡ ಈ ದಿನ ದುರದೃಷ್ಟವಶಾತ್ ಅನೇಕ ತೊಂದರೆಗಳನ್ನೆದುರಿಸುತ್ತಿದೆ. ಕನ್ನಡನಾಡಿನಲ್ಲಿ ಭಾರತದ ಎಲ್ಲೆಡೆಗಳಿಂದ ಆಗಮಿಸಿದವರು ಕನ್ನಡವನ್ನು ಕಲಿಯದಿರುವುದರಿಂದ; ಅದರಲ್ಲಿ ವ್ಯವಹರಿಸದೇ ಇರುವುದರಿಂದ ಭಾಷೆಯ ಜನಶಕ್ತಿ ಕುಂಠಿತವಾಗುತ್ತಿದೆ. ಕನ್ನಡಿಗರೂ ಕನ್ನಡದಲ್ಲಿ ಸಂಭಾಷಿಸುವುದನ್ನು ಕಡಮೆ ಮಾಡುತ್ತಿದ್ದಾರೆ. ಇದರ ಜೊತೆಗೆ ಜಾಗತೀಕರಣ ಎಲ್ಲರ ಮನಸ್ಸುಗಳನ್ನು ಚದುರಿಸಿ "ಎಲ್ಲಾ ಒ.ಕೆ. ಕನ್ನಡ ಯಾಕೆ?" ಎಂದು ಕೇಳುವ ಹಾಗೆ ಮಾಡಿದೆ. ಆಂಗ್ಲ ಭಾಷೆಯ ಆರ್ಥಿಕಶಕ್ತಿ ತಾಯಿತಂದೆಯರು ತಮ್ಮ ಮಕ್ಕಳನ್ನು ಕನ್ನಡಮಾಧ್ಯಮಶಾಲೆಗಳಿಗೆ ಸೇರಿಸದಿರುವ ಹಾಗೆ ಮಾಡಿದೆ. ಕನ್ನಡ ಮಾಧ್ಯಮದಲ್ಲಿ ಓದುವವರು ತೀರ ನಿರ್ಗತಿಕರೇ ಆಗಿರುವ ಸಂಭಾವನೆ ಹೆಚ್ಚು. ಪಾಶ್ಚಾತ್ಯ ಸಂಸ್ಕೃತಿಯು ಆರ್ಥಿಕವಾಹಿನಿಯಲ್ಲಿ ಪ್ರವಹಿಸುತ್ತ ಬಡತನದಲ್ಲಿರುವ ನಮ್ಮ ದೇಶದ ಸಂಸ್ಕೃತಿಗೆ ಸವಾಲಾಗಿ ನಿಂತಿದೆ. ತೀರ ತಿಳಿಯದವರೋ ಅಥವಾ ಸ್ವಲ್ಪ ಚೆನ್ನಾಗಿ ತಿಳಿದಿರುವವರು ಮಾತ್ರ ಸ್ವದೇಶದ ಸಂಸ್ಕೃತಿಯನ್ನುಳಿಸಿದ್ದಾರೆ. ಮಧ್ಯದ ಹಲವರಿಗೆ "ಸಂಸ್ಕೃತಿ? ಹಾಗೆಂದರೇನು? ಹೊಟ್ಟೆಗೆ ಹಿಟ್ಟು, ಬಟ್ಟೆಗ ಜೀನಿದ್ದರೆ ಸಾಲದೆ?" ಎಂದು ಕೇಳುವವರೇ! ಎಮ್.ಜಿ. ರಸ್ತೆಯ ಅಂಗಡಿಗಳಲ್ಲಿ, ಕೋರಮಂಗಲದ ಮಾಲ್ ಗಳಲ್ಲಿ ಕನ್ನಡ ಫಲಕಗಳಿರುವುದು ಕನ್ನಡದ ಅಭಿಮಾನಿಗಳೆಂದು ತಮ್ಮನ್ನು ತಾವೇ ಕರೆದುಕೊಳ್ಳುವ ಕೆಲವರ ಕಲ್ಲುತೂರಾಟದಿಂದ ತಪ್ಪಿಸಿಕೊಳ್ಳಲು ಮಾತ್ರ. ಆ ಫಲಕಗಳನ್ನು ಬಿಟ್ಟರೆ ಅಲ್ಲಿ ಕನ್ನಡವೇನೇನೂ ಇಲ್ಲ ಎಂದು ಹೇಳಲು ವಿಷಾದವಾಗುತ್ತದೆ.
ಕನ್ನಡದ ದೊಡ್ಡ ಕೊರತೆಯೇನೆಂದರೆ ಕನ್ನಡಿಗರಿಗೆ ತಮ್ಮ ನಾಡು-ನುಡಿಗಳ ಬಗ್ಗೆ ಇಲ್ಲದಿರುವ ಅಭಿಮಾನ. ನಾವು ತೀರ ಅಭಿಮಾನಶೂನ್ಯರು. ಕನ್ನಡದ ಬಗ್ಗೆ ಅಭಿಮಾನವಿದ್ದರೆ ತಾನೆ ನಮ್ಮ ಮನೆಗಳಲ್ಲಿ ಅದನ್ನು ಉಪಯೋಗಿಸುವುದು; ಹೊರಗಿನ ಅಂಗಡಿಗಳಲ್ಲಿ ಉಪಯೋಗಿಸುವುದು. ಇಂಗ್ಲಿಷ್ ಪದಗಳು ಕನ್ನಡದೊಡನೆ ಚೆನ್ನಾಗಿ ಬೆರೆತಿವೆ. ಒಂದು ದೃಷ್ಟಿಯಲ್ಲಿ ತಪ್ಪಿಲ್ಲದಿದ್ದರೂ ಅಮ್ಮನ ಬದಲಾಗಿ ಮದರ್, ಅಪ್ಪನ ಬದಲಾಗಿ ಫಾದರ್ - ತೀರ ಹತ್ತಿರದ ಶಬ್ದಗಳನ್ನೂ ನಾವು ಬಿಟ್ಟರೆ ನಮ್ಮ ನುಡಿ ಕನ್ನಡವಾಗಿ ಹೇಗೆ ಉಳಿದುಕೊಳ್ಳುತ್ತದೆ? "ಉ" ಕಾರ ಸೇರಿಸಿಬಿಟ್ಟರೆ ಅದು ಕನ್ನಡವೇ? "ನಮ್ ಫಾದರ್ ಸ್ವಲ್ಪ ಸಿಕ್ ಆಗಿದಾರೆ. ಅವರನ್ನು ನಮ್ಮ ಬ್ರದರ್ ಡಾಕ್ಟರ್ ಹತ್ರ ಡ್ರಾಪ್ ಮಾಡಲು ಹೋಗಿದಾರೆ" - ಈ ರೀತಿಯ ಮಾತುಗಳು ಸರ್ವೇ ಸಾಮಾನ್ಯ, ನಮ್ಮನ್ನು ಆಶ್ಚರ್ಯಕ್ಕೀಡುಮಾಡುವುದಿಲ್ಲವೆಂಬುದೇ ಖೇದದ ಸಂಗತಿ. ಜೊತೆಗೆ ನಮ್ಮ ಪತ್ರಿಕೆಗಳಲ್ಲಿ, ದೂರದರ್ಶನವಾಹಿನಿಗಳಲ್ಲಿ, ಬಾನುಲಿ (ಎಂಥ ಸೊಗಸಾದ ಶಬ್ದ!) ಯ ವಾಹಿನಿಗಳಲ್ಲಿ ಕೂಡ ಕನ್ನಡ ಚೆನ್ನಾಗಿ ಕಾಣುತ್ತಿಲ್ಲ, ಕೇಳುತ್ತಿಲ್ಲ. ಜನರ ಓದಿನ ಮತ್ತು ಮಾತಿನ ಬಗೆಯನ್ನು ಬದಲಾಯಿಸಬಲ್ಲ ಸಶಕ್ತ ಮಾಧ್ಯಮಗಳಾದ ಇವು ಭಾಷೆಯನ್ನುಳಿಸುವ ರೀತಿಯೆಲ್ಲಿ, ಕನ್ನಡನುಡಿಯನ್ನು ಹೇಗೆ ಬಳಸಬೇಕು ಎಂಬ ಮಾದರಿಗಳಾಗಬೇಕೆಂದು ನಾನು ಕೇಳಿಕೊಳ್ಳುತ್ತೇನೆ. ಪುಸ್ತಕಗಳಲ್ಲಿ ಅಷ್ಟು ನುಡಿಯ ಶೈಥಿಲ್ಯ ಕಾಣದೇ ಹೋದರೂ ಸಾಹಿತ್ಯ-ಸಮಾಜ ಶಾಸ್ತ್ರಗಳು ಒಂದಕ್ಕೊಂದಕ್ಕೆ ಅಂಟಿರುವುದು ಕಾಣುತ್ತದೆ. ಶುದ್ಧಸಾಹಿತ್ಯ ನಮ್ಮಲ್ಲೀಚೆಗೆ ಕಡಮೆಯಾಗಿದೆ. ಅದರ ಪ್ರಯೋಜನವನ್ನು ಮನಗಾಣದಿರುವವರೇ ಹಲವರು. ಶುದ್ಧಸಾಹಿತ್ಯದ ಬಗ್ಗೆ ಮನಸ್ಸಿರುವವರು ಹಳೆಯಕಾಲದವರಾಗಿ ಕಾಣಿಸುತ್ತಾರೆ. ಭಾಷೆ ಬೆಳೆಯುವುದಕ್ಕೆ ಉಳಿಯುವುದಕ್ಕೆ ಸಾಹಿತ್ಯದ ಕೊಡುಗೆ ಅಪಾರ. ಇದು ಎಲ್ಲರಿಗೂ ತಿಳಿದ ವಿಚಾರವೆಂದುಕೊಂಡಿದ್ದೆ. ಆದರೆ ಹಲವರಿಗೆ, ಸಾಹಿತ್ಯಸುದೂರರಿಗೆ ಇದರ ಗಂಧವೇ ಇಲ್ಲ.
ಅಭಿಮಾನರಾಹಿತ್ಯ ಕನ್ನಡಾಭಿಮಾನದ ಕಾಮನಬಿಲ್ಲಿನ ಒಂದು ಕೊನೆಯಾದರೆ, ದುರಭಿಮಾನ ಇನ್ನೊಂದು ಕೊನೆ. "ತಮಿಳು ತಲೆಗಳ ನಡುವೆ" ಯ ಬಗ್ಗೆ ಬರೆದ ಲೇಖನದಲ್ಲಿ ನಾವು ಕನ್ನಡಿಗರು ಸದ್ಯ ತಮಿಳರ ರೀತಿ ದುರಭಿಮಾನಿಗಳಲ್ಲವಲ್ಲ ಎಂದು ನೆಮ್ಮದಿಯ ನಿಟ್ಟುಸಿರನ್ನು ಬಿಟ್ಟಿದ್ದೆ. ಆದರೆ ನನ್ನ ನಿಟ್ಟುಸಿರು ಆ ಕಾಲಕ್ಕೆ ಮಾತ್ರ. ಈಚೆಗೆ ಅಂತರ್ಜಾಲದಲ್ಲಿ ಒಂದು ಬಗೆ ಕಾಣುತ್ತಿದೆ. ಕೆಲವು "ಕಟ್ಟಾ" ಕನ್ನಡಾಭಿಮಾನಿಗಳು ಕನ್ನಡದ ಉದ್ಧಾರ ಕನ್ನಡೇತರ ವಿಷಯಗಳ ಹಗೆಯಿಂದಲೇ ಸಾಧಿಸಬಹುದು ಎಂದು ತಿಳಿದುಕೊಂಡ ಹಾಗಿದೆ. ಕನ್ನಡ ಬೇರೆಯ ಭಾಷೆಗಳಿಂದ ಉಪಕೃತವಾಗಿದೆ ಎಂಬ ತಥ್ಯವನ್ನು ಒಪ್ಪಿದರೂ ಹಲುಬುವವರೇ ಹೆಚ್ಚು. ಒಪ್ಪುವವರೂ ಆ ಭಾಷೆಗಳ ಪ್ರಭಾವವನ್ನು ಕನ್ನಡದಿಂದ ಕಿತ್ತು ಹಾಕಬೇಕೆಂಬ ಹುನ್ನಾರದಲ್ಲಿರುವವರು. ಅಚ್ಚಗನ್ನಡದ ಪ್ರವರ್ತಕರಿವರು. ಉದಾಹರಣೆಗೆ: "ಭಾಷೆ" ಎಂದರೆ ಇಂಥವರಿಗೆ ಮೈಲಿಗೆ. ಉಲಿ ಅಥವಾ ನುಡಿಯೆನ್ನಬೇಕು. ಧನ್ಯವಾದವೆನ್ನದೆ "ನನ್ನಿ" (ತಮಿಳಿನ ನನ್ರಿಯ ಹಾಗೆ)ಯೆನ್ನಬೇಕು. ಒಂದು ಶಬ್ದ ಕನ್ನಡದಲ್ಲಿಲ್ಲವೆಂದರೆ ಅದರ ತದ್ಭವವನ್ನಾದರೂ ಉಪಯೋಗಿಸಬೇಕು - "ಹೊತ್ತಿಗೆ"ಯೆಂದೇ ಹೇಳಬೇಕೇ ಹೊರತು "ಪುಸ್ತಕ"ವೆಂದಲ್ಲ. ಹೀಗೆ ವೀರವ್ರತಿಗಳಿವರು. ಆದರೆ "ಇಂಜಿನಿಯರು" ಎಂದೆನ್ನಬಹುದು. ಜೊತೆಗೆ ಕನ್ನಡಕ್ಕೆ ಅದರದೇ ವಿಜ್ಞಾನವಿರಬೇಕು, "ನಾನು ಮೊದಲು ಕನ್ನಡಿಗ, ಆಮೇಲೆ ಭಾರತೀಯ" ಮುಂತಾದ ವಿಚಾರಗಳು ಈ ಗಣಕ್ಕೆ ಸೇರಿವೆ. ಇವನ್ನು ನೋಡಿದಾಗ "ತಮಿಳು-ದುರಭಿಮಾನ"ವೇ ಮೊದಲಾದ ವಿಷಯಗಳು ಮನಸ್ಸಿಗೆ ಬಂದುವು. ನಮ್ಮ ಜನರಲ್ಲಿ ಸಹಿಷ್ಣುತೆ ಕಡೆಮೆಯಾಗುತ್ತಿದೆಯೇ ಎಂಬ ಪ್ರಶ್ನೆ ಎದ್ದಿತು. ಕನ್ನಡವನ್ನೇ ಉಪಯೋಗಿಸಬೇಕೆಂಬ ಇವರ ಧೋರಣೆ ಶ್ಲಾಘನೀಯವೇ ಆದರೂ ಇವರ ದ್ವೇಷ-ಪೂರ್ಣ-ಆಗ್ರಹ ಸರಿಯೇ ಎಂಬುದು ನನ್ನ ಪ್ರಶ್ನೆ. ನುಡಿಯೊಲುಮೆಯಿಂದ ನುಡಿಗಳನ್ನುಲಿಯಬೇಕೇ ಹೊರತು ಬೇರೆಯದರ ಹಗೆಯಿಂದಲ್ಲ. ಭಾಷೆಯ ಜೊತೆ ಜಾತಿ-ಧರ್ಮ-ಸಮಾಜವಾದಗಳ ಸಂಕರವನ್ನು ಇವರು ತಿಳಿದೋ ತಿಳಿಯದೆಯೋ ಮಾಡಿರುವಂತಿದೆ. ಆದರೆ ಒಂದು ಮಾತನ್ನು ಇವರು ನೆನಪಿಡಬೇಕು.ಭಾಷೆಯ ಗತಿಯನ್ನು ಒಂದು ಸಮುದಾಯ ಕಾಲ ನಡೆದ ಹಾಗೆ ನಿರ್ಧರಿಸುತ್ತದೆ. ಹಠಾತ್ತನೆ ಚುನಾವಣೆ ಮಾಡಿ ಅಲ್ಲ. ಈ ಗಣದ ಆ ಬಣದ ಕನ್ನಡವೆಂದೇನೂ ಇಲ್ಲ.
ಒಬ್ಬರದಂತೂ ಒಂದು ಭಾಷೆಯ ಗತಿಯನ್ನು ಚುನಾವಣೆ ಮಾಡಿ ನಿರ್ಧರಿಸಬಹುದೆಂಬ ಗಟ್ಟಿ ನಿಲುವು. ಜನರ ಚುನಾವಣೆಯ ತೀರ್ಪು ಭಾಷೆಯ ಗತಿಯನ್ನು ನಿರ್ಧರಿಸಬೇಕೇ ಹೊರತು ಹಳೆಯ ವ್ಯಾಕರಣವಲ್ಲ ಎಂಬುದು ಇವರ ಅಂಬೋಣ. ಇದು ನಾನೊಪ್ಪದ ಮಾತು. ಒಂದನೆಯ ತರಗತಿಯ ಮಕ್ಕಳನ್ನು ಕರೆದು - ನಿಮಗೆ ಗಣಿತದ ವಿಷಯ ಬೇಕೇ ಬೇಡವೇ ಎಂದು ತೀರ್ಪು ಕೇಳಿದರೆ, ಇದರಲ್ಲಿ ಬಹುಮಟ್ಟಿಗೆ ಮಕ್ಕಳು ಗಣಿತ ಬೇಡವೆಂದೇ ಹೇಳುತ್ತಾರೆ. ಆದ್ದರಿಂದ ಗಣಿತ ಆ ಒಂದನೆಯ ತರಗತಿಯ ಮಕ್ಕಳಿಗೆ ಯಾವಾಗಲೂ ಬೇಡವೆಂದೇ? ಅಥವಾ ನಮ್ಮ ಈಗಿನ ಚುನಾವಣೆಗಳು ಮಾಡುತ್ತಿರುವ ಅನರ್ಥ ಇವರಿಗೆ ಕಾಣಿಸುತ್ತಿಲ್ಲವೇ? ಸಂಸ್ಕೃತ-ವ್ಯಾಕರಣ ಬೇಡವೇ ಬೇಡ, ಕೇಶಿರಾಜನ ಶಬ್ದಮಣಿದರ್ಪಣವೂ ಸಂಸ್ಕೃತದ ಜಾಡನ್ನನುಸರಿಸುವುದರಿಂದ ಬೇಡ. ಅವೆಲ್ಲವೂ ಗೊಡ್ಡು, ಅವರನ್ನನುಸರಿಸುವರು ಪ್ರತಿಗಾಮಿಗಳು ಎಂದೆಲ್ಲ ವಾದ ಇವರಂಥ ಕೆಲವರದು. "ವೈಯುಕ್ತಿಕ", "ಇಂತಿ", "ಅಂತಃಶಿಸ್ತೀಯ","ಆಂತರ್ರಾಷ್ಟ್ರೀಯ" - ಇವೇ ಮೊದಲಾದ ಶಬ್ದಗಳು ವ್ಯಾಕರಣ-ರೀತ್ಯಾ ತಪ್ಪಾದರೂ ಕೆಲವು ಜನರು ಬಳಸುವುದರಿಂದ ಸರಿ ಎನ್ನುವ ಹಠ ಅವರದು. ನನ್ನ ಉತ್ತರ : ಜನಸಮುದಾಯ ಭಾಷೆಯ ಗತಿಯನ್ನು ನಿರ್ಧರಿಸಿದರೂ ಅದು ಹಠಾತ್ತನೆ ನಡೆಯುವುದಿಲ್ಲ. ಈ ವಿಷಯದಲ್ಲಿ ಒಂದು ಕಾಲಮಾನವನ್ನೂ ಹೇಳಲು ಬರುವುದಿಲ್ಲ. ಒಂದು ಹೊಲದಲ್ಲಿ ಬೆಳೆಗೂ ಕಳೆಗೂ ವ್ಯತ್ಯಾಸವಿಲ್ಲದೇ ಹೋಗಿ ಕಳೆಯೇ ಬೆಳೆ ಎಂದು ನಿರ್ಧರಿಸಲು ಏಕಾಏಕಿ ಆಗುವುದಿಲ್ಲ. ಅಥವಾ ಬೆಳೆದವರು ಬೆಳೆಯನ್ನು ಬಿಟ್ಟು ಕಳೆಯನ್ನೇ ತಿನ್ನಲು ಪ್ರಾರಂಭಿಸಿದರೆ ಆಗಬಹುದೋ ಏನೋ!
ಸಂಸ್ಕೃತದ ವ್ಯಾಕರಣವನ್ನು ಮಹರ್ಷಿ-ಪಾಣಿನಿಯು ಮಾಡಿದ್ದು. ಈತ ತನ್ನ ಕಾಲದ ಭಾಷೆಯನ್ನು ಸೆರೆಹಿಡಿದು ಅದನ್ನು ವರ್ಣಿಸುವ ನಿಯಮಗಳನ್ನು ಸೂತ್ರರೂಪದಲ್ಲಿ ನೀಡಿ ಸಂಸ್ಕೃತ-ವಾಙ್ಮಯಕ್ಕೆ ಉಪಕಾರವನ್ನು ಗೈದಿದ್ದಾನೆ. ಭಾಷೆಯ ಸಾಧ್ವಸಾಧುತನಗಳನ್ನು ಇದಮಿತ್ಥಮ್ ಎಂದು ನಿರೂಪಿಸಬಲ್ಲುದು ಈತನ ವ್ಯಾಕರಣ. ಈ ವ್ಯಾಕರಣಕ್ಕೆ ಸಂಸ್ಕೃತ ಸಾಹಿತ್ಯ ಬದ್ಧವಾದದ್ದರಿಂದಲೇ ನಮಗೆ ಈಗಲೂ ಕಾಲಿದಾಸನ, ವಾಲ್ಮೀಕಿಯ, ವ್ಯಾಸರ ವಚನಗಳು ಅರ್ಥವಾಗುವುದಕ್ಕೆ ಸಾಧ್ಯ. ಇದನ್ನು "ನಿಂತ ನೀರು" ಎಂದು ಕರೆಯುವವರೂ ಇದ್ದಾರೆ. ಇರಬಹುದು. ಆದರೆ ಆ ನಿಂತ ನೀರು ಕೊಳವಲ್ಲ, ಅಗಾಧ-ಸಮುದ್ರವೆಂದು ಹೇಳುತ್ತೇನೆ. ಸಂಸ್ಕೃತದಲ್ಲಿ ಅನಂತ-ನೂತನ-ಶಬ್ದೋತ್ಪಾದನದ ಅಂತಃಶಕ್ತಿಯಿದೆ. ಬೇರೆ ಭಾಷೆಯ ನೆರವನ್ನು ಕೋರದೆ ಹೊಸ ಪದವನ್ನು ಆವಿಷ್ಕರಿಸಬಹುದು. ಇರಲಿ. ಇದರ ಬಗ್ಗೆ ಆಮೇಲೆ ಮಾತಾಡೋಣ. ಗೀರ್ವಾಣಭಾಷೆಯ ವ್ಯಾಕರಣದಲ್ಲಿ ನಾವು ಕನ್ನಡಿಗರು ಪಂಡಿತರಾಗಬೇಕೆಂದೇನಿಲ್ಲ. ಆದರೆ ಸ್ಥೂಲವಾದ ಅರಿವನ್ನಾದರೂ ಕನ್ನಡಿಗರಾದ ನಾವು ಪಡೆಯಬೇಕು. ನಾವು ಸಾಮಾನ್ಯವಾಗಿ ಮಾತಾಡುವ ಭಾಷೆಯೆಡೆ ಗಮನ ಹರಿಸಿದರೆ ಸ್ವಲ್ಪ ಅದರ ಮಹತ್ತ್ವ ತಿಳಿಯುತ್ತದೆ. ಉದಾಹರಣೆಗೆ - "ಶಂಕರ" ಮತ್ತು "ರುದ್ರ" ಇವೆರಡೂ ಪದಗಳು ಶಿವನ ಪರ್ಯಾಯಶಬ್ದಗಳಾದರೂ ಶಂಕರನೆಂದರೆ ಮಂಗಲವನ್ನುಂಟು ಮಾಡುವವನು, ರುದ್ರನೆಂದರೆ - "ಹೋ ಎಂದು ಅಳುವವನು, ಲಯಕರ್ತಾ" ಎಂಬ ಅರ್ಥಗಳಿವೆ. ಆಯಾ ಸಂದರ್ಭಗಳಲ್ಲಿ ಶಬ್ದಗಳನ್ನು ಬಳಸಬೇಕಾದಾಗ ಅದರ ಅರ್ಥವ್ಯಾಪ್ತಿಯ ಕಡೆ ದೃಷ್ಟಿಯಿರಬೇಕೆಂಬುದಷ್ಟೆ ನನ್ನ ವಿಚಾರ. ಅಷ್ಟಕ್ಕೆಷ್ಟು ಸಂಸ್ಕೃತ ಬೇಕೋ ಅಷ್ಟನ್ನು ಕಲಿತರೆ ತಪ್ಪೇನಿಲ್ಲವಲ್ಲ? ಸಂಸ್ಕೃತಶಬ್ದಗಳನ್ನುಪಯೋಗಿಸುವಾಗ ಆ ಭಾಷೆಯ ಮರ್ಯಾದೆಯನ್ನು ಕನ್ನಡದಲ್ಲಿ ತರುವುದು ಸರಿಯೋ ತಪ್ಪೋ? ಈಗ, ಫ್ರೆಂಚಿನ "Bourgeois" ಅನ್ನು ಕನ್ನಡದಲ್ಲಿ ಆಂಗ್ಲದ ಮೂಲಕ ತಂದಾಗ ಅದನ್ನು ಬೂರ್ಝುವಾ ಅಂದೆವೋ ಅಥವಾ ಬೌರ್ಜಿಯಾಯಿಸ್ ಎಂದೆವೋ? ನೀವೇ ಯೋಚಿಸಿ ನೋಡಿ. ಇದನ್ನೇ ಸಂಸ್ಕೃತಮೂಲದ ಶಬ್ದಗಳಿಗೆ ಮಾಡಬೇಕೆಂಬುದು ನನ್ನ ಆಶಯ. "ಜ್ಞಾನ"ವನ್ನು ಗ್ನಾನವೆಂದು ಆಡುಭಾಷೆಯಲ್ಲಿ ಹೇಳಬಹುದೇ ಹೊರತು ಬರೆವಣಿಗೆಯಲ್ಲಿ ಯೋಗ್ಯವಲ್ಲ. ಹಾಗೆ ಬಂದಾಗ ಕೃತಜ್ಞತೆ-ಕೃತಘ್ನತೆಗಳಿಗೆ ಭೇದವಿಲ್ಲದೇ ಹೋಗಿ ಕೃತಗ್ನತೆ ಆಗಬಹುದು - ಇಲ್ಲೂ ಇಲ್ಲ, ಅಲ್ಲೂ ಇಲ್ಲ! ಸಂಸ್ಕೃತ-ವ್ಯಾಕರಣವನ್ನು ಕನ್ನಡಿಗರು ಆದ್ಯಂತವಾಗಿ ಅಧ್ಯಯನ ಮಾಡಬೇಕೆಂಬುದೇನೂ ನನ್ನ ಧೋರಣೆಯಲ್ಲ. ಅದೇ ಸಮಯದಲ್ಲಿ ಸಂಸ್ಕೃತ-ಭೂಯಿಷ್ಠವಾದ ಕನ್ನಡದಲ್ಲಿ ವ್ಯವಹರಿಸಬೇಕೆಂಬ ಧೋರಣೆಯೂ ನನ್ನದಲ್ಲ. ಈಗ್ಗೆ ಐವತ್ತು-ವರ್ಷಗಳ ಹಿಂದೆ ಬಂದ ಪುಸ್ತಕಗಳಲ್ಲಿ ಅದರ ಹದವಿದೆ. ಈಗಲೂ ಬಹಳಷ್ಟು ಪುಸ್ತಕಗಳಲ್ಲಿ ಅದನ್ನು ಕಾಣಬಹುದು. ಕೆ.ಎಸ್.ನರಸಿಂಹಸ್ವಾಮಿಗಳ ಭಾಷೆ ಆ ಹದಕ್ಕೆ ಒಂದು ಪ್ರತೀಕ (ನನ್ನ ಪ್ರಕಾರ). ಅಲ್ಲೋ ಇಲ್ಲೋ ತಪ್ಪು ಬಂದರೆ ವ್ಯಾಕರಣದ ದುರ್ಬೀನಿನಿಂದ ಪರೀಕ್ಷೆ ಮಾಡಬೇಕೆಂದೂ ಅಲ್ಲ. ಶಬ್ದಗಳ ಸಾಧುತ್ವದ ಬಗ್ಗೆ ಬುದ್ಧಿಯ ಒಂದು ಕೋಣೆಯಲ್ಲಿ ಯೋಚನೆಯಿರಲಿ ಎಂದು ಮಾತ್ರ ಹೇಳಲು ಬಯಸುವೆ. ವಸ್ತುತಃ ಹಲವು ಸಾಹಿತಿಗಳ ಭಾಷೆ ನೋಡಿದಾಗ ಹದದಿಂದಲೇ ಅವರು ಸಾಹಿತ್ಯನಿರ್ಮಾಣಮಾಡುವುದನ್ನು ನೋಡುತ್ತೇವೆ.
ಸಂಸ್ಕೃತಾಂಗ್ಲಗಳನ್ನು ಕನ್ನಡಕ್ಕೆ ಹಾನಿಕಾರಕ ಎಂದು ಪರಿಗಣಿಸಿ ಅವೆರಡನ್ನು ಸಮೀಕರಿಸುವುದನ್ನು ಕೂಡ ಕಂಡಿದ್ದೇನೆ. "ಎರಡೂ ಕನ್ನಡಕ್ಕೆ ಪರಕೀಯ. ಆದ್ದರಿಂದ ಅವೆರಡೂ ತ್ಯಾಜ್ಯ" ಎಂಬ ಭಾವನೆ ಕೂಡ ಇದೆ. ನನ್ನ ಪ್ರಕಾರ ಅದು ಅವಿವೇಕ. ಏಕೆಂದರೆ ಆಂಗ್ಲವಿಲ್ಲದೆ ಕನ್ನಡದ ಸಾಕಷ್ಟು ಸಾಹಿತ್ಯವಿದೆ. ಆದರೆ ಸಂಸ್ಕೃತವಿಲ್ಲದೆ ಕನ್ನಡಸಾಹಿತ್ಯ ಇರಲಿಲ್ಲ. ಆಂಡಯ್ಯ ಬರೆದ ಅಚ್ಚಗನ್ನಡಗಬ್ಬದಲ್ಲಿ ಕೂಡ ಸಂಸ್ಕೃತದಿಂದ ಪಡೆದ ಕನ್ನಡೀಕರಿಸಿದ ಶಬ್ದಗಳೇ ಇದ್ದುವು. ಹಿಂದೆಯೇ ಬರೆದ ಹಾಗೆ ಸಂಸ್ಕೃತಶಬ್ದಗಳ ಹಿತ-ಮಿತವಾದ ಬಳಕೆ ಕನ್ನಡದಲ್ಲಿರಬೇಕು. ಪಿತಾಶ್ರೀ ಅಥವಾ ಮಾತ್ರೃಶ್ರೀ ಎಂದು ತಂದೆ-ತಾಯಿಯರನ್ನು ಸಂಬೋಧಿಸುವುದು ಹಾಸ್ಯಾಸ್ಪದವೇ ಬಿಡಿ. ತೆಲುಗಿನ ಹಾಗೆ ಅತಿ ಮಾಡಬಾರದು. ತಮಿಳಿನ ಹಾಗೆ ತೊರೆಯಲೂ ಬಾರದು. ಆದರೂ ತಮಿಳಿನಲ್ಲಿ ಅವೆಷ್ಟೋ ಸಂಸ್ಕೃತಶಬ್ದಗಳಿವೆ. ಅವನ್ನು ನಿವಾರಿಸಲು ಸಾಧ್ಯವಿಲ್ಲ. ಎಲ್ಲ ಅನಿಷ್ಟಗಳಿಗೂ ಶನೈಶ್ಚರ ಮೂಲವೆಂಬಂತೆ ಸಂಸ್ಕೃತವನ್ನು ದೂರುವುದು ಸರಿಯಲ್ಲ. ಇದನ್ನು ಒತ್ತಿ ಹೇಳುತ್ತಿರುವುದೇಕೆಂದರೆ ಜಾತಿ ರಾಜಕಾರಣ ಭಾಷೆಯಲ್ಲಿ ನುಸುಳುತ್ತಿದೆ. ಅದು ಭಾಷೆಯ ಒಳಿತಿಗೆ ಅಷ್ಟು ಒಳ್ಳೆಯ ಸಂಗತಿಯಲ್ಲ.
ಕೆಲವರು ಆಡುಗನ್ನಡಕ್ಕೇ ಗ್ರಾಂಥಿಕ ಕನ್ನಡಕ್ಕಿಂಥ ಹೆಚ್ಚಾಗಿ ಪ್ರಾಧಾನ್ಯ ಕೊಡಬೇಕು ಎಂದು ವಾದಿಸುವವರಿದ್ದಾರೆ. ಆಡುಗನ್ನಡಕ್ಕೂ ಗ್ರಂಥಗಳ ಕನ್ನಡಕ್ಕೂ ವ್ಯತ್ಯಾಸವಿದೆ. ಅಂತರಜಾಲದ ಬ್ಲ್ಗಾಗುಗಳ ಕನ್ನಡವೂ ಬಹಳಷ್ಟು ಎರಡನೆಯ ಬಗೆಯದೇ. ಆಡುಗನ್ನಡಕ್ಕೆ ಮಾತ್ರ ಮಣೆಹಾಕಿದರೆ ಕಾಲಕ್ರಮೇಣ ನಮ್ಮ ಶಬ್ದಭಂಡಾರ ಕುಸಿದುಹೋಗುತ್ತದೆ. ಕನ್ನಡ ಎಂದು ಹೇಳಲು ಏನುಳಿಯುತ್ತದೆ? ಹಳಗನ್ನಡದ ಎಷ್ಟೋ ಶಬ್ದಗಳು ಈಗ ಕಳೆದುಹೋಗಿವೆ. ಅದರಿಂದ ನಮ್ಮ ಭಾಷೆಯೇ ಬಡವಾಗಿದೆ. ಇದೇ ಮುಂದೆ ಹೋಗಿ ತುಳು-ಕೊಡವ ಭಾಷೆಗಳ ಸ್ಥಿತಿ ಕನ್ನಡದ್ದಾಗಬಾರದು ಎಂದು ನನ್ನ ಆಶಯ.
ಪಂಪ-ರನ್ನ-ಕುಮಾರವ್ಯಾಸ-ವಚನಕಾರ-ದಾಸರ ಕನ್ನಡ ನಮಗೆ ಬೇಕು. ಏಕೆಂದರೆ ಅವುಗಳಲ್ಲಿ ಹಾಸುಹೊಕ್ಕಾಗಿರುವ ಕನ್ನಡ ಸಂಸ್ಕೃತಿ ನಮಗೆ ಬೇಕು. ಆಡುಭಾಷೆಯನ್ನೇ ಗಮನಿಸಿ ಗ್ರಾಂಥಿಕಭಾಷೆಯನ್ನು ಎಣಿಸದೇ ಹೋದರೆ ಅನರ್ಥವಾದೀತು. ಒಂದು ಭಾಷೆ ಏಕೆ ಬೇಕಾಗುತ್ತದೆ? ಮುಖ್ಯವಾಗಿ ಸಂವಹನೆಗೆ. ಇದರದೇ ಇನ್ನೊಂದು ಮುಖ ಭಾವನಾಭಿವ್ಯಕ್ತಿ. ದೈನಂದಿನ ಸಂಪರ್ಕಕ್ಕೆ ಆಡುಭಾಷೆ ಮುಖ್ಯ. ಆದರೆ ಅದರಲ್ಲಿ ಬಳಸುವ ಶಬ್ದಗಳ ಸಂಖ್ಯೆ ಕಡಮೆ. ಇದರ ಜೊತೆಗೆ ಒಂದು ಪ್ರಾಂತ್ಯದ ಆಡುನುಡಿಗೂ ಮತ್ತೊಂದರ ಆಡುನುಡಿಗೂ ಬಹಳಷ್ಟು ವ್ಯತ್ಯಾಸ ಕಾಣುತ್ತದೆ. ಆಡುನುಡಿಯನ್ನು ಇದೇ ಎಂದು ಹೇಳಲು ಆದ್ದರಿಂದ ಕಷ್ಟ. ಇದಕ್ಕೆ ವ್ಯಾಕರಣ ಮಾಡಿದರೂ ನಿತ್ಯ ಬದಲಾಯಿಸುತ್ತಿರಬೇಕು. ಭಾವಾಭಿವ್ಯಕ್ತಿಗೂ ಕಾನೂನು ಮುಂತಾದ ವಿಷಯಗಳಲ್ಲೂ ಆ ಪ್ರದೇಶಗಳ ನಡುವೆ ಸಂಪರ್ಕ ಸಾಧ್ಯವಾಗಬೇಕಾದರೆ ಆ ಕನ್ನಡ ಗ್ರಾಂಥಿಕವೆಂದು ಕರೆಸಿಕೊಳ್ಳುವ ಕನ್ನಡಕ್ಕೆ ಹೆಚ್ಚು ಹತ್ತಿರ ಬರುತ್ತದೆಯಲ್ಲವೇ? ಜೊತೆಗೆ ವಿಜ್ಞಾನ, ವಾಣಿಜ್ಯ, ಕಾನೂನು ಮುಂತಾದ ವಿಷಯಗಳಲ್ಲಿ ಆಡುಭಾಷೆಯೇ ಸಾಕಾಗುತ್ತದೆಯೇ? ಆಮೇಲೆ ರಸಾನಂದ ಕೊಡುವ ಸಾಹಿತ್ಯಕ್ಕೆ? ಕನ್ನಡದ ಅಪಾರಸಾಹಿತ್ಯವನ್ನು ಸವಿಯುವುದಕ್ಕೆ ಆಡುಗನ್ನಡವಷ್ಟೇ ಸಾಲದು. ಕನ್ನಡವೆಂದರೆ ಇವೆಲ್ಲವೂ ಮತ್ತು ಇದಕ್ಕಿಂಥ ಹೆಚ್ಚಿನದು. ಆಡುಗನ್ನಡವನ್ನೇ ಎತ್ತಿಹಿಡಿಯುವವರು ಇದನ್ನು ಗಮನಿಸಲೇಬೇಕು.
"ಹಿಂದೂಸ್ಥಾನದ ಆರು ಕುರುಡರು" ಎಂಬ ಪದ್ಯ ನೆನಪಿಗೆ ಬರುತ್ತದೆ. ಕನ್ನಡ ಅಲ್ಲಿನ ಆನೆಯಿದ್ದ ಹಾಗೆ. ಒಬ್ಬೊಬ್ಬರೂ ತಮಗೆ ಕಂಡದ್ದೇ ಸತ್ಯವೆಂದು ತಿಳಿದು ಹಾಗೆ ವಾದಿಸುತ್ತಾರೆ. ಆದರೆ ಈ ವಿಷಯದಲ್ಲಿ ನಾನು ಅರೆಕುರುಡನೆಂದು ತಿಳಿದೇ ಇದನ್ನು ಬರೆಯುತ್ತಿದ್ದೇನೆ. ಒಂದೇ ವಸ್ತುವಿನಲ್ಲಿ ಆಸಕ್ತರಾಗಿರುವ ಬೇರೆಯವರೂ ಇದೇ ದೃಷ್ಟಿಕೋನದಿಂದ ನೋಡಿದರೆ ಬೇರೆಬೇರೆ ದೃಷ್ಟಿಗಳ ಸಮನ್ವಯ ಸಾಧ್ಯವೋ ಏನೋ. ಅದನ್ನು ಬಿಟ್ಟು ಕುರುಡರೊಬ್ಬರು ಮತ್ತೊಬ್ಬರನ್ನು ಅರೆಕುರುಡನೆಂದು ಜರೆಯುವುದೇ ಇಂದಿನ ಸ್ಥಿತಿಯಾಗಿದೆ. ತಮಗೆ ಸಿಕ್ಕ ಬೈಗುಳಕ್ಕೆ ತಿರುಗಿ ಬೈಯುವುದರಲ್ಲಿ ಶಕ್ತಿಯ ವ್ಯಯವಾಗುತ್ತದೆಯೇ ಹೊರತು ಬೇರೆ ಪ್ರಯೋಜನವಿಲ್ಲ.
ಎಲ್ಲರಿಗೂ ಕನ್ನಡ-ನಾಡಹಬ್ಬದ ಶುಭಾಶಯಗಳು.
|| ಸಿರಿಗನ್ನಡಂ ಗೆಲ್ಗೆ ||

17 comments:
lekhana chennagide. maatina koLeyannu tegeyuvudakkoskara vyaakarana avashya vaagiruvudu ("yogena chittasya padena vaachaam..."). haagiruvaaga vyaakaranave beDa endare maatinalli bari koLe uLiyuttade. nimma "bele" -"kaLe" udaaharaNe bahaLa sooktavaagide.
halmidi shaasanadinda kuvempuravara kaavyada vareguu samskrita kannaDada jothe bereyutta bandide.
(kannada font upayogisadiruvudakke kshame koruttene)
ನೀಲಗ್ರೀವರೆ,
ತಮಿಳು ಧೀರರ ಜೊತೆ ಪೈಪೋಟಿಗೆ ನಿಂತಿರುವ ಕನ್ನಡ ವೀರರಿಗೆ ಸ್ವಾಗತ ಹೇಳುವುದು ಬಿಟ್ಟು ಇನ್ನೇನಾದರೂ ಮಾಡಲು ಸಾಧ್ಯವೇ? ಕಡೇ ಪಕ್ಷ ಈ ಬಗೆಯಲ್ಲಾದರೂ ಅಭಿಮಾನ ಮೂಡುವುದೋ ಎಂಬ ನಿರೀಕ್ಷೆಯನ್ನು ಮಾಡಬೇಕಷ್ಟೆ. ಹಾಗೆಂದು ನಾನು ಅರ್ಥ, ಪುಸ್ತಕ, ಸ್ನೇಹಿತ, ವಾರ, ನಿಮಿಷ, ಉಪಯೋಗ, ಖಂಡಿತ, ಅನುಮಾನ, ಪದ, ವಾಕ್ಯ ಇಂತಹ ಪದಗಳನ್ನು ಉಪಯೋಗಿಸುವುದನ್ನು ಬಿಡಲಾರೆ. ಈ ಕೆಲವು ಪದಗಳಲ್ಲಿ ಕನ್ನಡನೆಲದ ಸತ್ವವೂ ಇಲ್ಲವೇ? ಹಾಗಿಲ್ಲದಿದ್ದರೆ ಅನುಮಾನ, ನಿಮಿಷ, ಖಂಡಿತ ಇಂತಹ ಪದಗಳಿಗೆ ಸಂಸ್ಜೃತದಲ್ಲಿಲ್ಲದ ಹೊಸ ಅರ್ಥಗಳು ಕನ್ನಡದಲ್ಲಿ ಬಂದಿರುತ್ತಿದ್ದುವೇ?
ನಾನು ನೋಡಿದುವ ಹಾಗೆ ಹೆಚ್ಚಿನ ತಮಿಳರಿಗೂ, ಕನ್ನಡದವರಿಗೂ ಇರುವ ವ್ಯತ್ಯಾಸವೆಂದರೆ - ಕನ್ನಡದವರಿಗೆ ದಿನಬಳಕೆಯಲ್ಲಿ ಇರುವ ಪದಗಳು ಮೂಲದಲ್ಲಿ ಸಂಸ್ಕೃತದಿಂದ ಬಂದಿದೆ ಎಂಬ ಅರಿವು ಸ್ವಲ್ಪಮಟ್ಟಿಗಾದರೂ ಇದೆ. ತಮಿಳರು ತಾವು ಉಪಯೋಗಿಸುವ ಪದಗಳು ಎಂದೆಂದೂ ಬೇರೆ ಭಾಷೆಯಿಂದ ಬಂದಿರಬಹುದು ಎಂಬ ಯೋಚನೆಯನ್ನೂ ಮಾಡಲಾರರು.
ಸಂಸ್ಕೃತವನ್ನೂ, ಹಿಂದಿಯನ್ನೂ ಒಂದೇ ಹಳದಿ ಬಣ್ಣದ ಗಾಜಲ್ಲಿ ನೋಡುವುದು ನನಗಂತೂ ಆಗದು.
-ನೀಲಾಂಜನ
modalu "kannada font upayogisadiruvudakke kshame koruttene" -- pARAManand/ARAM
Neelagriva, Neelaanjana, Paramaanandarugaley: tammellara barahagalu chennagivey.
bahushaha berelloo kaanada ondu dodda guna kannadigarallidey - tamma nudiya jothegeye berey nudigalannoo kaliyuva tavaka avarallidey.
kannada naadina mannina gunavo eno, kannada saahityavannu, nudiyannu shreemantha golisidavaralli hechhinavara maney maatu kannadavalla. Ee visheshavannu bere bhashegalalli nodiddeeraa?
sirigannadam gelge
ನೀಲಗ್ರೀವ, ನಿಮ್ಮ ಬರಹ ಒಳ್ಳೆಯ ಓದನ್ನು ನೀಡಿತು. ನಾನು ಸುಧಾದಲ್ಲಿ ಪ್ರಕಟವಾದ ಬರಹಗಳನ್ನು ಓದಿದೆ. ಹಾಗೆಯೇ ನಿಮ್ಮ ಲೇಖನದಲ್ಲಿ ನೋಡಿ.
೧. "ಕನ್ನಡ ಎಂದು ಹೇಳಲು ಏನುಳಿಯುತ್ತದೆ? ಹಳಗನ್ನಡದ ಎಷ್ಟೋ ಶಬ್ದಗಳು ಈಗ ಕಳೆದುಹೋಗಿವೆ. ಅದರಿಂದ ನಮ್ಮ ಭಾಷೆಯೇ ಬಡವಾಗಿದೆ." - ಅಂತಲೂ ಹೇಳುತ್ತೀರಿ.
೨. "ಪಂಪ-ರನ್ನ-ಕುಮಾರವ್ಯಾಸ-ವಚನಕಾರ-ದಾಸರ ಕನ್ನಡ ನಮಗೆ ಬೇಕು. ಏಕೆಂದರೆ ಅವುಗಳಲ್ಲಿ ಹಾಸುಹೊಕ್ಕಾಗಿರುವ ಕನ್ನಡ ಸಂಸ್ಕೃತಿ ನಮಗೆ ಬೇಕು. " - ಅಂತಲೂ ಹೇಳುತ್ತೀರಿ.
ಆದರೆ
"ನನ್ನಿ ಪದದ ಬಳಕೆಯನ್ನು ನಾನು ಒಪ್ಪಲ್ಲ", ಅಂತಲೂ ಹೇಳುವಿರಿ. ಈ ದ್ವಂದ್ವ ಏಕೆ ?
ನೋಡಿ, "ನನ್ನಿ" ಎಂಬ ಪದವನ್ನು ಹಳಗನ್ನಡ ಕಾವ್ಯಗಳಲ್ಲಿ, ವಚನಗಳಲ್ಲಿ ಹೇಗೆ ಬಳಕೆಯಾಗಿದೆ ಎಂಬುದು ನಿಮಗೆ ತಿಳಿಯದ ವಿಷಯವೇನಲ್ಲ. "ವಚನಕಾರರ ಕನ್ನಡ ಸಂಸ್ಕೃತಿ" ಬೇಕು ಅಂತೀರಿ, ಆದರೆ ವಚನಕಾರರು ಬಳಸಿದ "ನನ್ನಿ" ಪದ ಬೇಡ ಅಂತೀರಿ. ಇದು ಯಾವ ಸೀಮೆಯ ನ್ಯಾಯ, ನೀಲಗ್ರೀವ. ದ್ವಂದ್ವ ಆಗಲಿಲ್ಲವೇ ನಿಮ್ಮ ನಿಲುವು. ನಿಮ್ಮ ಮಾತಿನಲ್ಲಿಯೇ ಆಡುವ ಮಾತಿಗೂ, ಕೃತಿಗೂ ಎಷ್ಟು ವ್ಯತ್ಯಾಸವಿದೆ ನೋಡಿ. "ನನ್ನಿ" ಎಂಬ ಪದ ವಚನಗಳಲ್ಲಿ ಹಾಸುಹೊಕ್ಕಾಗಿದೆ. ಕೆಲವು ವಚನಗಳನ್ನು http://www.sampada.net/forum/4839#comment-9301 ಇಲ್ಲಿ ನೀಡಿದ್ದೇನೆ ಬಿಡುವಿದ್ದಾಗ ಓದಿ.
"ಕೆಲವರು ಆಡುಗನ್ನಡಕ್ಕೇ ಗ್ರಾಂಥಿಕ ಕನ್ನಡಕ್ಕಿಂಥ ಹೆಚ್ಚಾಗಿ ಪ್ರಾಧಾನ್ಯ ಕೊಡಬೇಕು ಎಂದು ವಾದಿಸುವವರಿದ್ದಾರೆ. "
ಎಂದಿದ್ದೀರಿ . ಯಾರಿದು ? ಎಲ್ಲಿ ಹೇಳಿದ್ದಾರೆ ?
ನಾನಂತೂ ನೋಡಿಲ್ಲ ;
ನಾನು ಓದಿದ ಪ್ರಕಾರ .. ಆಡುನುಡಿಗಳನ್ನೂ ಪೋಷಿಸಿಕೊಂಡು ಬರ್ಬೇಕು ...
ಅವಕ್ಕೂ ತಕ್ಕ ಸ್ಥಾನ ಸಿಗಬೇಕು ...
ಪರಸ್ಪರ ಗೌರವ ಹೊಂದಿರ್ಬೇಕು, ಅಪಹಾಸ್ಯ ಮಾಡಬಾರದು .
ಜೋಯಿಯವರೆ,
ನನ್ನ ಬರೆಹವನ್ನು ತಪ್ಪಾಗಿ ನೀವು ಗ್ರಹಿಸಿರುವಂತಿದೆ. ನಾನು "ನನ್ನಿ" ಶಬ್ದದ ಉಪಯೋಗ ಬೇಡ ಎಂದು ಎಲ್ಲಿ ಹೇಳಿದ್ದೇನೆ? ನೀವೇ ಸರಿಯಾಗಿ ಓದಿ ತೋರಿಸಿ.
ನಾನು ಹೇಳಲು ಹೊರಟದ್ದು - "ನನ್ನಿ"ಯೆಂದೇ ಹೇಳಬೇಕು ಅನ್ನುವ ಮಡಿಯ ಧೋರಣೆಯನ್ನು ಕುರಿತು.ತಮಿಳುನಾಡಿನಲ್ಲಿ "ಶ್ರೀ" ಅನ್ನುವುದರ ನಿಷೇಧ ಮಾಡಿ "ತಿರು"ವೆಂದೇ ಹೇಳಬೇಕೆಂದು ಮಾಡಿರುವರಲ್ಲ, ಹಾಗೆ ನಾವು ಮಾಡಿದರೆ ಚೆನ್ನಾಗಿರುವುದಿಲ್ಲ ಎಂದು ನಾನು ಹೇಳಿದ್ದು. "ನನ್ನಿ"ಯನ್ನು ಉಪಯೋಗಿಸಬಾರದು ಎಂದೇನು ಹೇಳಿಲ್ಲ. "ನನ್ನಿ" "ಧನ್ಯವಾದಕ್ಕಿಂತ" ಕಿವಿಗೆ ಹಿತವಾಗಿ ಕೇಳುತ್ತದೆ. ನನಗೂ ಈ ಶಬ್ದ ಇಷ್ಟವೇ. ಆದರೆ ಈ ಶಬ್ದವನ್ನೇ ಉಪಯೋಗಿಸಬೇಕೆಂಬ ಮಡಿ ಬೇಡ ಎಂದಷ್ಟೆ ನಾನು ಹೇಳುವುದು. ಈಗ ನನ್ನ ದೃಷ್ಟಿಕೋನ ನಿಮಗೆ ಅರ್ಥವಾಗಿರಬೇಕೆಂದು ತಿಳಿದಿದ್ದೇನೆ. ತಮಿಳರ ತಪ್ಪುಗಳನ್ನು ನಾವು ಮಾಡುವುದು ಬೇಡ ಎಂಬುದು ನನ್ನ ಆಸೆ.
ಶ್ರೀಕಾಂತ ಅವರೆ,
ನಾನು ಕೆಲವೆಡೆ ಆಡುಮಾತಿಗೇ ಪ್ರಾಧಾನ್ಯಕೊಡಬೇಕೆಂದು ವಾದಿಸುವವರನ್ನು ಗಮನಿಸಿದ್ದೇನೆ. ನಿಮ್ಮ ಮಾತನ್ನು ಆದರೆ ನಾನೊಪ್ಪಿದೆ. ಎರಡನ್ನೂ ಪೋಷಿಸಬೇಕು. ಎರಡಕ್ಕೂ ಅವುಗಳ ಸ್ಥಾನಮಾನಗಳಿವೆ. ಆದರೆ ಆಡುನುಡಿಯಲ್ಲಿ ಗ್ರಂಥದ ಭಾಷೆ ತಂದರೆ ಎಷ್ಟು ಹಾಸ್ಯಾಸ್ಪದವೋ ಒಂದು ಗಂಭೀರ ಲೇಖನದಲ್ಲಿ ಆಡುನುಡಿಯ ಶಬ್ದವನ್ನು ಬರೆದರೆ ಅಷ್ಟೇ ಅನುಚಿತವಾಗಿ ಕಾಣುವುದಿಲ್ಲವೇ? ಇಲ್ಲಿ ನನ್ನ ಮಾತನ್ನು ಒಪ್ಪುತ್ತೀರಿ ಎಂದು ಬಗೆದಿದ್ದೇನೆ.
ನೀಲಾಂಜನ,
ದುರಭಿಮಾನ ನಮಗೆ ಬೇಡ. ಒಮ್ಮೆ "ತಮಿಳು ತಲೆಗಳ ನಡುವೆ" ಓದಿ ನೋಡಿ. ನಾನೇಕೆ ಅದನ್ನು ಹೇಳಿದೆನೆಂದು ನಿಮಗೆ ಅರ್ಥವಾಗುವುದು.
ಪರಮಾನಂದ ಅವರೆ,
ನಿಮ್ಮ ಅನಿಸಿಕೆಗೆ ನನ್ನ ಧನ್ಯವಾದಗಳು.
ಆರಾಮ್,
ನೀವು ಹೇಳುವುದು ನಿಜವಾಗಿ ಸೋಜಿಗದ ಸಂಗತಿಯೇ. ಮನೆಮಾತು ಕನ್ನಡವಲ್ಲದವರಿಂದ ಕನ್ನಡಕ್ಕೆ ಹೆಚ್ಚಿನ ಕೊಡುಗೆ ಸಿಕ್ಕಿದೆಯೆಂಬುದರಲ್ಲಿ ಸತ್ಯವಿದೆ. ಆದರೆ ಕನ್ನಡ ಮನೆಮಾತಾಗಿರುವವರಿರದಿದ್ದರೆ ಇವರೆಲ್ಲರೂ ಏನು ಮಾಡುತ್ತಿದ್ದರು ಎಂಬ ಪ್ರಶ್ನೆಯೂ ಏಳುತ್ತದಲ್ಲ?
ನನ್ನಿ, (ಜೋಯಿಯವರೇ ಗಮನಿಸಿ, ನಾನೂ ಇದನ್ನೇ ಉಪಯೋಗಿಸಿದ್ದೇನೆ)
-ನೀಲಗ್ರೀವ
ನೀಲಗ್ರೀವ, "ಮಡಿ ಬೇಡ ಎಂದಷ್ಟೆ ನಾನು ಹೇಳುವುದು" ಎನ್ನುವ ನಿಮ್ಮ ಪಾಯಿಂಟ್ ನಿಜಕ್ಕೂ ತುಂಬಾ ತುಂಬಾ ಇಷ್ಟವಾಯಿತು. ಕನ್ನಡದ ಮಟ್ಟಿಗಿನ ಮಡಿವಂತಿಕೆಯ ಹಾಗೆಯೇ ಸಂಸ್ಕೃತದ ಮಡಿವಂತಿಕೆಯೂ ಬೇಡ ಅನ್ನುವುದಕ್ಕೆ ನೀವು ಕೈಜೋಡಿಸುತ್ತೀರಿ ಅಂದುಕೊಳ್ಳುವೆ. ಉದಾ:- ಕೋಳಿ ಸಾಕಾಣಿಕೆಗೆ "ಕುಕ್ಕುಟ ಉದ್ಯಮ" ಎನ್ನುವುದು, cache ಎನ್ನುವುದಕ್ಕೆ ಸಿದ್ಧಸ್ಮೃತಿಕೋಶ, cdಗೆ ಬಂಧಮುದ್ರಿಕೆ. ಇದು ಯಾವ ಸೀಮೆ ಕನ್ನಡ ನೀವೇ ಹೇಳಿ ? ಕೇವಲ ಪಂಡಿತರ ಪರಿಭಾಷೆಯಲ್ಲಿರುವ ನುಡಿಗಟ್ಟುಗಳಿವು.
ನನ್ನ ಅನಿಸಿಕೆಯಲ್ಲಿ ಹೇಳಬಹುದಾದರೆ, ನಾವು ಹಿಂದಿನಿಂದಲೂ ವಿಜ್ಞಾನಕ್ಕೆ ಸಂಬಂಧಪಟ್ಟ ಪದಗಳನ್ನು ಅನೇಕ ಪದಗಳನ್ನು ಸಂಸ್ಕೃತದಿಂದ ಎರವಲು ಪಡೆದಿದ್ದೇವೆ ನಿಜ. ಏಕೆಂದರೆ ಜ್ಞಾನದ ಕಾನ್ಸೆಪ್ಚಯಲೈಸೇಶನ್ ಸಂಸ್ಕೃತದಲ್ಲಿ ಆಗಿತ್ತು. ಆದರೆ ಈಗ ಸ್ಪಷ್ಟವಾಗಿ ಹೇಳಬೇಕೆಂದರೆ ಕಂಪ್ಯೂಟರ್ ವಿಷಯಗಳು ಸಂಸ್ಕೃತದಲ್ಲಿ ಸೃಷ್ಟಿಯಾಗುತ್ತಿರುವ ಜ್ಞಾನವಲ್ಲ. ಇಂಗ್ಲೀಷಿನಿಂದ ಸಂಸ್ಕೃತಕ್ಕೆ ತರ್ಜುಮೆಯಾಗಿ ನಂತರ ಅದು ಕನ್ನಡದ ಹೆಸರಿನಲ್ಲಿ ಬರುತ್ತಿರುವ ಕೆಟ್ಟ ಪದಪ್ರಯೋಗಗಳು. ಇದಕ್ಕೆ ನನ್ನ ಸ್ಪಷ್ಟವಿರೋಧವಿದೆ.
ಇದಕ್ಕೆ ಒಂದು ದಿಟ್ಟು ಉದಾಹರಣೆ, ನಾವು ಚಿಕ್ಕವರಿದ್ದಾಗ ಓದಿದ, ಹೊಗೆಬಂಡಿ. ಇದನ್ನು ಯಾರು ಚಾಲ್ತಿ ತಂದರೋ ಗೊತ್ತಿಲ್ಲ. Railways ಎಂಬುದನ್ನ ಧೂಮಶಟಕ ಎಂದು ಸಂಸ್ಕೃತದಲ್ಲಿ ತರ್ಜುಮೆ ಮಾಡಿ ನಂತರ ಆ ಸಂಸ್ಕೃತ ಪದವನ್ನು ಹೊಗೆಬಂಡಿ ಎಂದು ತರ್ಜುಮೆ ಮಾಡುವ ಅವಶ್ಯಕತೆಯೇನು ? ಅಷ್ಟಕ್ಕೂ ನಾವೆಲ್ಲರೂ ಇಂದು ಟ್ರೈನು, ರೈಲು ಅಂತಲೇ ಹೇಳ್ತಾ ಇದ್ದೀವೆಯೇ ಹೊರತು, ಧೂಮಶಕಟ, ಹೊಗೆಬಂಡಿ ಎಂದು ಹೇಳುತ್ತಿಲ್ಲವಲ್ಲ. ಈ ಸಿದ್ಧಸ್ಮೃತಿಕೋಶ ಮುಂತಾದ ಪದಪ್ರಯೋಗಗಳ ಬಗ್ಗೆ, ನಿಸಾರ್ ಅಹ್ಮದ್ ಅವರ ಒಂದು ಪಾಡ್ಕಾಸ್ಟಿನಲ್ಲಿ ಪ್ರಸ್ತಾಪವಾಗಿದೆ. ಬಿಡುವಿದ್ದಾಗ ಕೇಳಿ ನೋಡಿ. ಪಂಪ-ರನ್ನ ಮುಂತಾದವರ ಕೃತಿಗಳಲ್ಲಿರಬಹುದಾದ ಸಣ್ಣ, ಸರಳ ಕನ್ನಡ ಪದಗಳನ್ನು ತಿಳಿದುಕೊಂಡು ಎಲ್ಲರಿಗೂ ತಿಳಿಸಿಕೊಟ್ಟು, ಕನ್ನಡ ಪದಗಳ ಅರ್ಥವ್ಯಾಪ್ತಿಯನ್ನು ಹೆಚ್ಚಿಸುವಲ್ಲಿ ನೀವು ಸಹಕರಿಸುತ್ತೀರಿ ಎಂದು ನಂಬುತ್ತೇನೆ. ಇದು ಸಂಸ್ಕೃತ ದ್ವೇಷದ ಮಾತು ಖಂಡಿತವಾಗಿಯೂ ಅಲ್ಲ, ಕನ್ನಡದ ಸರಳ ಪದಗಳ ಹುಡುಕಾಟ. ಅದರ ಒಂದು ಸ್ಯಾಂಪಲ್ ನೋಡಬೇಕಿದ್ದರೆ, ಇದನ್ನು ಓದಿ. ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ.
ಅಂದಹಾಗೆ, ನೀಲಗ್ರೀವ, ನಿಮಗೆ ನನ್ನಿ ಪದ ಇಷ್ಟವಾಗಿ, ಅದನ್ನು ಬಳಸಿದ್ದು, ನನಗೂ ಸಂತೋಷವಾಯಿತು.
ಧನ್ಯವಾದಗಳು(ಗಮನಿಸಿ, ನಾನೂ ಇದನ್ನು ಮಡಿವಂತಿಕೆಯಿಲ್ಲದೆ ಬಳಸುತ್ತಿದ್ದೇನೆ)
--ಜೋಯ್ :)
ನೀಲಗ್ರೀವರೇ,
ನಾನು ತಮಿಳು ತಲೆಗಳ ನಡುವೆ ಓದಿದ್ದೇನೆ. ಜೊತೆಯಲ್ಲಿ , ತಮಿಳುತಲೆಗಳ ನಡುವೆ ಒಂದೆರಡು ವರ್ಷ ಬಾಳಿಯೂ ಇದ್ದೇನೆ. ಹಾಗಾಗಿ, ಸ್ವಾಮಿಯವರ ಬರಹದಲ್ಲಿ ಅವರ ಹಾಸ್ಯ ಸ್ವಭಾವಕ್ಕನುಗುಣವಾಗಿ ಸ್ವಲ್ಪ ಉತ್ಪ್ಪ್ರೇಕ್ಷೆಯೂ ಸೇರಿದೆ ಎಂದು ನನ್ನ ಅನಿಸಿಕೆ.ಹಾಗೆಂದು ನಾನು ತಮಿಳು ದುರಭಿಮಾನಿಗಳ ಪರ ಎಂದುಕೊಳ್ಳಬೇಡಿ. ದುರಭಿಮಾನ ತಮಿಳರದ್ದ್ದೇ ಆಗಲಿ, ಕನ್ನದಿಗರದ್ದೇ ಆಗಲಿ ಒಳ್ಳೆಯದಲ್ಲ :)
-ನೀಲಾಂಜನ
How was Kannada faring some 40-60 years ago?
Here is a glimpse excerpted from Dr. M. Shivaram(A great Kannada humorist, popularly known as Raa.Shi.)'s autobiographical book, "Kailasam and I" published in 1969. The late Raa.Shi.was a close associate of the legendary Kailasam (1885-1946)
The book, though out of print, is available with me, if you wish to read or acquire it.
Interestingly, though he had penned some 26 or so books in Kannada, Raa.Shi. chose to write this in English. He has also written another English book titled, Death and The Nachiketas.
(excerpts from pages 99 to 105)
"Kailasam was elected President for the annual meet of the Kannada Sahitya Parishat, to be held at Madras. Apart from other things, the one important task that worried him was the Presidential Speech. The Speech would normally last for about an hour. It would in the usual course of events, cover a wide field in Kannada literature, its achievements and failures, and a plan or suggestions for future guidance. It had to be ready quite early so that it could be printed and distributed to the delegates at the time of the meet. Kailasam was staying with me then, and he passed on the worrying to me. Not the execution of the speech, that was entrusted to Sri Siddavanahalli Krishna Sharma. It is well-known that Sri Krishna Sharma has the gift of collecting the thoughts of others, analyse them, and put them into crisp, simple sentences, so that it would be easily understood by everybody. Kailasam had requested his old friend, Sharmaji to write up the script. But, he had to express his ideas. This is where I came in.
He would sit with me and think aloud, and ask me to clarify them, add to them, or suggest new ideas. Well! In one field I was equal to Kailasam, and that is in the colossal ignorance of Kannada literature, old, mid-period, or new. Like blind leading the blind, I was supposed to aid him in formulating his ideas. When he espied my total helplessness in this matter he would get angry and furious. He said, "I am a Tamilian, and have an excuse not to know Kannada literature. But you are born a Kannadiga, your mother-tongue is Kannada, and your Mother-in-law tongue is also Kannada, and you are a Kannadiga by profession. That is you cannot get on in your profession in Bangalore without knowing Kannada. You have no bloody excuse to be so ignorant." Even when I told him, that I needed no Kannada in my practice, he would not listen. A third of my patients talk to me in Tamil or Telugu and English. Another third in Urdu or Hindi or Hindusthani - to me all are the same -- and of course in English. The last third talk in some language I do not well understand, and they do not seem to understand my replies, and yet they are happy and so I am happy. Where is the need to know Kannada for anyone in Bangalore. "We are all Bharatha Matheya Makkalu and emotions are more important than language! And so on. A Kannadiga is taught English in his babyhood, daddy and mummy are the first words that he lisps. Later on he reads in Anglo-Vernacular Schools, that was the name given to the Primary and Middle Schools in my days. The Anglo came first and the inferior Vernacular came next, a poor second language. So we used to play in English and curse in choice Kannada. Thus we developed a brilliant expressive Kannada, but that could never enter into literature. After we married, the fashion was "Well my dear, my honey, my darling, etc." If you make love in English, and in intense moments revert to the language of sighs, and grunts, and Tarzan, where is the need to know Kannada? But what was the use of explaining all this to Kailasam, he would not listen, because it did not solve his immediate problem. Anyway, he did not cease to cross-examine me. The questions and answers would be somewhat on the following pattern.
"They talk a lot about the greatness and glory of geniuses like Ranna, Pampa, etc. Can you tell me something about them. Some popular and profound sayings which I may quote?"
"No, Sir, I have heard of their names like you have done. But I have not read any of those books, and have not listened to people who talk about them."
"Haalaagi Hoythu, at least do you know some other Poet or author. Do you remember anything they have said. You know what I mean, any of the lesser ones?"
"I am sorry, Sir, I have not heard of any other Poets at all. Apart from Ranna and Pampa and another Pampa or Ranna, I do not think there are other poets. Anyway I have not heard of them."
"Negedu Biddu Hoythu, any one of the Middle Age Poets. Do you remember?"
"I do not know about the Middle Age Poets or Authors. I do not think there were any. If there were I should have heard from them, or about them."
"Damn you and your Kannada. At least do you know any Modern Poets or Authors."
"Oh Yes, Sir, I know K.V. Puttappa, Masthi, Bendre, V.Si., Jahagirdar. Oh Yes, I know any number of them. Shall I make a list, Sir."
"All those people I know personally and intimately. I have heard them, talked to them and discussed with them about Art and Literature. What I wanted from you was any of their pithy and profound sayings that you remember. Anything that has made a lasting impression on you?"
"No, Sir. But if you want I will refer to those books and pick up some quotations."
"Gosh! What a mistake I made in thinking that you knew something about Kannada literature. I have been telling people so. What a crass ass you are!"
The above specimen conversation will give you an idea of my contribution to the Presidential Address. Kailasam thereafter stuck out a new path, and decided to talk from his heart. He had a lot to tell, and Krishna Sharma very easily got into his Mano-Dharma, and did an excellent job of getting up the printed Presidential Address. The actual speech he delivered was of course ex tempore and did not have much to do with what was written and printed.
......................
In Madras when I heard his Ex Tempore speech I found that he had improved quite a lot on the written speech. The one-sided discussions he had with me and others must have enabled him to enlarge the scope and manner of presentation of his basic ideas and thoughts. But being a Tamilian he would be in a great hurry to express his flowing and rushing ideas. A Telugu man would have sung out his words sonorously and at leisure. The Kannadiga is midway between these two. But Kailasam was talking in Kannada, in a Tamilian hurry. He expected his audience to be very quick on the up-take and follow him. Alas! This was impossible. We, Kannadigas, are capable of understanding everything, give us time, don't rush us up. Where is the need for all that hurry?
Slow and sure wins the race. I sometimes wonder if the tortoise in "The Tortoise And Hare" story was a Kannada tortoise and the Hare a Tamil one! And the story was originated by a slow and sure Kannadiga, being sure that his language would not be understood by the Tamilian. True, the old Kannada Hale-Gannada and old Tamil have a lot in common. But we are grown up now, and outgrown our roots, haven't we? Those that are born from the same root have a tendency later on when grown up, to branch out on their own paths. The same as in Nature and Evolution. The birds and reptiles started from the same root. When fully developed they started quarrelling. The early bird catches the worm, and the reptile loves to eat the eggs of the birds!
Bear with us, please, the hurrying ones. We Kannadigas will catch up with you."
<>
@Aram,
Funny and yet very observant piece from rAshi. I haven't read rA.shi but he sure sounds interesting.
I somewhat feel that rA.shi was talking about his ignorance of KannaDa literature in jest. But the matter is a serious one. Very few of us present day Kannadigas endeavor to read any Pampa, Ranna or KumAravyAsa. (BTW, I have their works at home and try to look into them once a while. More of kumAravyAsa, actually). But a lot of us are not in the least inclined towards this - which is a real pity .
Thanks for replying. Perhaps your inclination towards serious and heavy literature made you miss out on Raa.Shi.
Kumaravyasa reminds me of the great Gamaki Bharata Bindu Rao who specialized and excelled in the recitation of Kumaravyasa's work. I happened to a couple of his sessions with my uncle in my pre-teenage years - "Sri Vaniteyarasane, Vimala Rajeevasutana Sutane (?)....
Those days Ramayana, Mahabharata vaachana sessions were popular and common, probably because of lack of today's entertainments.
Speaking for myself, Basavanna, Purandara, Kanaka Daasas appeal to me more than others mainly because of the simplicity of the language they use. I guess this is true of most people.
"ಆದರೆ ಕನ್ನಡ ಮನೆಮಾತಾಗಿರುವವರಿರದಿದ್ದರೆ ಇವರೆಲ್ಲರೂ ಏನು ಮಾಡುತ್ತಿದ್ದರು ಎಂಬ ಪ್ರಶ್ನೆಯೂ ಏಳುತ್ತದಲ್ಲ?"
Nimma, nanna haagey English athavaa berey nudigalalli bareyuttiddaru. -:)
@aram,
To be very frank with you, I am just opening my eyes as far as literature goes. I have skimmed through sections of this work and that, but have not done a full study of anything substantial - prose or poetry.
So, more than being tuned towards heavy literature, it is just that I have not read much at all. With all the interests I have, it is just not possible to dig deep into any one interest. However, while still being modest, I can claim to have read a wee bit more Kannada than the average kannaDiga.
ಈ ಬರಹ ಓದಿದವರು ತಟ್ಟನೆ, ಯಾರೂ ಅಪ್ಪಟ ಬ್ರಾಹ್ಮಣನ ಬರಹ ಎಂದೇ ಹೇಳಬಹುದು...
ಕನ್ನಡ ಹೇಗೆ ಇರಬೇಕು ಅಂತ ಬರೀ ಇವರೇ ಹೇಳಬೇಕು..
ಇವರಂತೆ ಮಂಡ್ಯದ ಗೌಡರು ಹಾಸನ ಗೌಡರು ತಪ್ಪು ತಪ್ಪು ಕನ್ನಡ ಮಾತಾಡ್ತಾರೆ..
ಅದು ಹೇಗೆ..
ಇವರಿಗೆ ಬೇರೆ ನುಡಿಯ ಗಾಳಿಯೇ ಸೋಕಿಲ್ಲ. ಬ್ರಾಹ್ಮಣರಾದರೂ ಒಂದು ಸಾಲಲ್ಲಿ ಕಡಮೆ ಅಂದರು ನಾಲ್ಕು ಸಂಸ್ಕೃತದ ಪದ ಬಳಸೇ ಬಳಸ್ತಾರಲ್ಲ.. ಅದೂ ಅಲ್ಲದೇ ಹವ್ಯಕರಂತೆ ಅವರೇ ಹೇಳಿಕೊಳ್ಳುವ ಹಾಗೆ ಅವರು ಉತ್ತರದಿಂದ ವಲಸೆ ಬಂದರಂತೆ ಇಲ್ಲಿ ಹವನ ಮಾಡಿಸಲು.
ಇದು ಬ್ರಾಹ್ಮಣದ ದ್ವೇಶವಲ್ಲ.... ಬೇರೆವರ ಮಾತಿಗೆ, ಅವರ ಮೇಲೆ ಇವರು ಮಾಡುವ ಹೇರಿಕೆಗೆ ಬರುವ ಮುನಿಸು!
Request permission to reproducue your article on Kannada, along with the comments in Sampada.net
Your blog's URL will be mentioned and credit acknowledged.
Thanks
Aram,
Can you give me your email address so that we can talk offline?
You can send me email at nilagriva at gmail dot com
Regards,
-nIlagrIva
Post a Comment