ಗಜಾನನಂ ಭೂತಗಣಾದಿಸೇವಿತಂ ಕಪಿತ್ಥಜಂಬೂಫಲಸಾರಭಕ್ಷಣಮ್ |
ಉಮಾಸುತಂ ಶೋಕವಿನಾಶಕಾರಣಂ ನಮಾಮಿ ವಿಘ್ನೇಶ್ವರಪಾದಪಂಕಜಮ್ ||
ಇದು ಕನ್ನಡದಲ್ಲಿ ಪ್ರಥಮ ಬ್ಲಾಗ್ ಇರಬಹುದು ! ಕನ್ನಡದಲ್ಲಿ ಬ್ಲಾಗ್ ಮಾಡಬೇಕೆಂದು ಬಹಳ ದಿನಗಳಿಂದ ಆಸೆಯಿದ್ದಿತು. ಬರಹ ೫.೦ ರಿಂದ ಇದು ಸಾಧ್ಯವಾಗಿದೆ. ಶೇಷಾದ್ರಿವಾಸು ಅವರಿಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು.
ಇದು ನನ್ನ ಪ್ರಥಮ ಪ್ರಯತ್ನ. ಗಣೇಶನ ಹೆಸರೊಂದಿಗೆ ಪ್ರಾರಂಭಿಸಿದ್ದೇನೆ. ಸಫಲವಾಗಿ ನೆರವೇರುವುದೆಂದು ನನ್ನ ನಂಬಿಕೆ.
ನನ್ನ ಹೆಸರನ್ನು ಗಮನಿಸಿದ್ದಿರಬೇಕು. ನನ್ನ ಹೆಸರು ನೀಲಗ್ರೀವ ಎಂದು. ನೀಲಗ್ರೀವನೆಂದರೆ ನೀಲಃ ಗ್ರೀವಃ ಯಸ್ಯ ಸಃ ಎಂದು. ನೀಲವರ್ಣದ ಕಂಠವುಳ್ಳವನು ಎಂದು ಈ ಪದದ ಅರ್ಥ. ಮಹಾದೇವ ರುದ್ರನೆಂದರ್ಥ. ಇದರ ಮೇಲಿನ ವ್ಯಾಖ್ಯಾನವನ್ನು ನಂತರ ಮುಂದುವರೆಸುವೆನು. ಸದ್ಯಕ್ಕೆ ಈ ಬ್ಲಾಗ್ (ಕನ್ನಡದಲ್ಲಿ ಸಮಾನ ಪದವನ್ನು ಹುಟ್ಟುಹಾಕಬೇಕು)ಅನ್ನು ಇಲ್ಲೇ ನಿಲ್ಲಿಸುವೆನು.
ಇದು ಸರಿಯಾಗಿ ಜಾಲಪುಟದಲ್ಲಿ ಕಂಡರೆ ಬಹಳ ಸಂತೋಷವುಂಟಾಗುತ್ತದೆ. ಸಿರಿಗನ್ನಡಂ ಗೆಲ್ಗೆ! ಸಿರಿಗನ್ನಡಂ ಬಾಳ್ಗೆ!
No comments:
Post a Comment