Monday, January 10, 2005

Kanchi mutt's junior seer arrested, remanded to 15 days judicial custody - Newindpress.com

Kanchi mutt's junior seer arrested, remanded to 15 days judicial custody - Newindpress.com

ಈ ಸಮಾಚಾರ ಬರುವುದಕ್ಕೆ ಸ್ವಲ್ಪ ಹೊತ್ತಿನ ಮುಂಚೆ ಹಿರಿಯ ಸ್ವಾಮಿಗಳ ಜಾಮೀನಿನ ಅರ್ಜಿ ಮಂಜೂರಾಗಿತ್ತು. ಸರಿ ಇಷ್ಟು ದಿನಗಳಾದ ಮೇಲೆಯೂ ಆಯಿತಲ್ಲಾ ಅಂದುಕೊಂಡರೆ ಸ್ವಲ್ಪ ಹೊತ್ತಿನಲ್ಲಿಯೇ ಕಿರಿಯ ಸ್ವಾಮಿಗಳನ್ನು ಎಳೆದೊಯ್ದಿದ್ದಾರೆ.

ಅದೂ ಈ ಸಲ ಕಾಂಚಿ ಪೀಠದೊಳಗೆ ನುಗ್ಗಿ ರಾಜಾರೋಷವಾಗಿಯೇ ತಮಿಳುನಾಡು ಪೋಲೀಸರು ಸ್ವಾಮಿಗಳಾದ ವಿಜಯೇಂದ್ರ ಸರಸ್ವತಿಗಳನ್ನು ದಸ್ತಗಿರಿ ಮಾಡಿದ್ದಾರೆ. ಕೇಳಿಬಂದ ವದನ್ತಿಗಳು - ಪೋಲೀಸರು ಪವಿತ್ರವಾದ ಸ್ಥಲವೆಂದೂ ಲೆಕ್ಕಿಸದೆ ಷೂಗಳನ್ನು ಧರಿಸಿಯೇ ಮಠದಲ್ಲಿ ನುಗ್ಗಿದ್ದಾರೆಂಬುದು.

ಯಾವಾಗಲೂ ನಮ್ಮನ್ನು ನಾವು ಬೇರೆಯ ಮತಗಳೊಂದಿಗೆ ಹೋಲಿಸಿಕೊಳ್ಳುತ್ತೇವೆ. ಈ ಸಲವೂ ಹಾಗೆಯೇ ಆಗಿದೆ. ಮುಸ್ಲಿಮರನ್ನೋ ಅಥವಾ ಕ್ರೈಸ್ತರನ್ನೋ ಹೀಗೆ ಬಂಧನಕ್ಕೊಳಪಡಿಸುತ್ತಿದ್ದರೇ ? ನಾನು ಈ ಹೋಲಿಕೆ ಸಮಂಜಸವಲ್ಲವೆಂದೇ ಯಾವಾಗಲೂ ತಿಳಿದಿದ್ದೆ. ಆದರೆ ಈ ರೀತಿಯಾದ ಮೇಲೆ - ನನಗೂ ಈ ಯೋಚನೆ ಬರುತ್ತಿದೆ. ದೆಹಲಿಯ ಜಾಮಾ ಮಸೀದಿಯ ಇಮಾಂ ಬುಖಾರಿಯವರು ಈ ರೀತಿಯ ಹಗರಣಗಳಲ್ಲಿ ಸಿಕ್ಕಿಕೊಂಡಿದ್ದರೂ ಅವರ ಮೇಲೆ arrest warrantಗಳಿದ್ದರೂ ಅವರ ಮೈಮೇಲಿನ ಕೂದಲನ್ನೂ ಅಲ್ಲಾಡಿಸಲು ಧೈರ್ಯವಿಲ್ಲ ಪೋಲೀಸರಿಗೆ. ಆದರೆ ಇನ್ನೊಂದು ಪ್ರಶ್ನೆ ಉದ್ಭವಿಸುತ್ತದೆ. ಈ ಸ್ವಾಮಿಗಳನ್ನು ಅಂಥವರೊಡನೆ ಹೋಲಿಕೆಮಾಡುವುದು ಯುಕ್ತವೇ ಎಂದು.

ಬಿ.ಜೆ.ಪಿ ಯ ಕೆಲಸದಿಂದಲೋ ಏನೋ ಗೊತ್ತಿಲ್ಲ. ಹಿಂದುಗಳಿಗೆ ಅನ್ಯಾಯವಾಗುತ್ತಿದೆ ಎಂಬ ಭಾವನೆ ನನ್ನಲ್ಲೂ ಮೂಡುತ್ತಿದೆ. ಒಬ್ಬರನ್ನು ಬಿಟ್ಟು ಇನ್ನೊಬ್ಬರನ್ನು ಆ ದಿನವೇ ಹಿಡಿಯುವ ಕೆಲಸದಿಂದ ರಾಜಕೀಯದ ದುರ್ಗನ್ಧ ಬರುತ್ತಿದೆ. ಜಯಲಲಿತಾ ಏನು ಮಾಡುತ್ತಿರಬಹುದು? ಏಕೆ ಇಷ್ಟು ಜಿದ್ದನಿಂದ ಕಾಂಚಿಮಠದ ಮೇಲೆ ಕ್ರಮಕೈಗೊಳ್ಳಲಾಗುತ್ತಿದೆ ? ಹಿಂದೆ ಏನೋ ಇದೆ. ನಮ್ಮಂಥಾ ಸಾಮಾನ್ಯರಿಗೆ ಇಂಥ ವಿಷಯಗಳ ಹಿಂದಿನ ಗುಟ್ಟು ಗೊತ್ತಾಗುವುದೇ ಇಲ್ಲ.

ಈಗಂತೂ ರೋಚಕ ಸಿನಿಮಾದ ಸನ್ನಿವೇಶದ ಹಾಗೆ ಈ ಸಂಗತಿ ನಡೆದಿದೆ. ಆದರೆ ಸಿನಿಮಾದ ಹಾಗೆ ಸುಮ್ಮನೆ ಮನೋರಂಜನ ಎಂದು ನೋಡಲು ಆಗುವುದಿಲ್ಲ. ಸುಮ್ಮನೆ ಕೂರಲು ಬರುವುದಿಲ್ಲ. ಏನಾದರೂ ಮಾಡಲೂ ಸಾಧ್ಯವಾಗುವುದಿಲ್ಲ. ಮುಂದೆ ಏನು ನಡೆಯುವುದೋ ದೇವರೇ ಬಲ್ಲ. ಕಾದು ನೋಡುವುದು ನಮ್ಮ ಕೆಲಸ.

|| ಇತಿ ಶಮ್ ||

No comments: