Thursday, January 20, 2005

'That Tower' has nothing to do with saint Kanaka

'That Tower' has nothing to do with saint Kanaka

ಬಹಳ ದಿನಗಳಿಂದ ಬ್ಲಾಗ್ ಬರೆಯಲು ಆಸೆಯಾದರೂ ಸಮಯವೇ ಇರಲಿಲ್ಲ. ಇಂದು ಸ್ವಲ್ಪ "ವಿರಾಮ" ಸಿಕ್ಕಿರುವ ಕಾರಣದಿಂದ ಇದರ ಬಗ್ಗೆ ಬರೆಯಬೇಕೆನ್ನಿಸಿತು.

"ಕನಕಗೋಪುರ" ಎಂದು ಹೆಸರಿಸಲ್ಪಟ್ಟ ಗೋಪುರಕ್ಕೆ ವಾಸ್ತವವಾಗಿ ಕನಕದಾಸರೊಡನೆ ಸಂಬಂಧವೇ ಇರಲಿಲ್ಲವೆಂಬುದನ್ನು ಈ ಲೇಖನ ಸ್ಪಷ್ಟವಾಗಿ ನಿರೂಪಿಸಿದೆ. ಬಹಳ ಚೆನ್ನಾಗಿ ವಿಷಯಸಂಗ್ರಹ ಮಾಡಿದ್ದಾರೆ ಡಾ|| ಚಿ.ಮೂ ಮತ್ತು ತಂಡದವರು. ಆದರೂ ಈ ಸಂಗತಿ ಇಲ್ಲಿಗೆ ಶಾಂತವಾಗುವುದಿಲ್ಲ ಎಂದು ವಿಷಾದದ ಸಂಗತಿ.

ಮೊನ್ನೆ ಟಿ.ವಿಯಲ್ಲಿ ಪೇಜಾವರ ಮಠದ ವಿಶ್ವೇಶತೀರ್ಥರಿಗೂ "ಕುರುಬರ ನಾಯಕ" ನೆಂಬ ಪಟ್ಟ ಹೊತ್ತ ವಿಶ್ವನಾಥ್ ಅವರ ನಡುವೆ ಸಂಭಾಷಣೆ ನಡೆಯಿತು. ಉದಯ ಟಿ.ವಿ ಒಳ್ಳೆಯ ಕೆಲಸವನ್ನೇ ಮಾಡಿದೆ. ಆದರೆ ಸ್ವಾಮಿಗಳು ಹೇಳುತ್ತಿದ್ದ ಒಂದೊಂದು ಸರಿಯಾದ ಸಂಗತಿಗೂ ವಿಶ್ವನಾಥ-ಅವರ ವಿತಂಡವಾದ ನಿಲ್ಲಲೇ ಇಲ್ಲ. ಇವರ ಮಧ್ಯೆ ಏನೂ ತಿಳಿಯದೇ ಮಧ್ಯೆ ಮೂಗು ತೂರಿಸುವ ಸಂದರ್ಶಕ. ಇವನನ್ನು ನೋಡಿ ನನಗೆ ಬಹಳ ಕೋಪ ಬಂದಿತ್ತು. ಸ್ವಾಮಿಗಳ ಸ್ಥಾನವೇನು ? ಆ ಸ್ಥಾನದ ಯೋಗ್ಯತೆಯ ಅರಿವಾದರೂ ಇವನಿಗೆ ಇರಬೇಡವೇ ? ಆದರೆ ಈ ಸಂವಾದ (ನಡೆದದ್ದು ವಿವಾದವೇ) ಒಂದು ವಿಷಯವನ್ನು ಸ್ಪಷ್ಟ ಮಾಡಿತ್ತು.

ಈಗ ರಾಜಕಾರಣಿಗಳಿಗೆ ಜನರ ಮನಸ್ಸಿನಲ್ಲಿರಲು ಏನಾದರೊಂದು ವಸ್ತು ಬೇಕಲ್ಲವೇ ? ಹುಡುಕಿದರು. ಪಕ್ಕದ ತಮಿಳುನಾಡಿನಲ್ಲಿ ಜಯೇಂದ್ರ ಸರಸ್ವತಿಗಳಿಗಾದ ಅವಮಾನ ಕಂಡಿತು. ಇದನ್ನೇ ನಾವು ಉಪಯೋಗಿಸೋಣೆವೆಂದು ಮಾಡಿರುವಂತೆ ಈ ಆಟವೆಲ್ಲ ತೋರಿದೆ. ಅಲ್ಲ, ಆಷ್ಟು ಸ್ಪಷ್ಟವಾಗಿ ಕನಕದಾಸರಿಗೆ ಸಂಬಂಧ ಪಟ್ಟದ್ದಲ್ಲವೆಂದು ತೋರಿಸಿದ್ದರೂ ಯಾರೋ ಬೇಜವಾಬ್ದಾರಿ ರಾಜಕಾರಣಿ - ಅದಮಾರು ಮಠದ ಸ್ವಾಮಿಗಳನ್ನು ಜೈಲಿಗೆ ಹಾಕುವಂತೆ ಆಗ್ರಹಿಸಿದ್ದಾನೆ. ಏನನ್ನೋಣ ಇವರ ಬುದ್ಧಿಗೆ ?

ಅದರೆ ನಮ್ಮ ಹಿಂದೂ ಸಮಾಜ ಹೀಗೆ ಒಡೆದು ಬೀಳುತ್ತಿರುವಾಗ ದೇವರ ಸಹಾಯವೆಂಬಂತೆ ಬೆನ್ನಿ ಹಿನ್ ಬೆಂಗಳೂರಿಗೆ ಬಂದಿದ್ದಾನೆ. ಇವನು ಕ್ರೈಸ್ತ ಮತಾಂಧ ಮೋಸಗಾರನೆಂಬುದು ಎಲ್ಲರಿಗೂ ತಿಳಿದಿದೆ. ಇದು ಸರ್ವೇ ಸಾಮಾನ್ಯವಾದ ವಿಷಯ. ಆಫೀಸಿನಿಂದ ಮನೆಗೆ ಹೋಗುವಾಗ ಬೆಂಗಳೂರಿನಲ್ಲಿ ದೊಡ್ಡದಾಗಿ ನೇತುಹಾಕಿದ್ದ - "Pray for India" ಫಲಕ ಎಲ್ಲೆಲ್ಲೂ ಕಾಣಿಸುತ್ತಿತ್ತು. ಇವನೇನು ನಮಗೆ pray ಮಾಡೋದು ಎಂದು ನನಗೆ ಕೋಪ ಬರುತ್ತಿತ್ತು. ಇದೇನು ಇಂಥ ಮೋಸಗಾರನಿಗೆ ನಾವು ಈ ರೀತಿ ಮರ್ಯಾದೆ ಮಾಡುತ್ತಿದ್ದೇವಲ್ಲಾ ಎಂಬ ಖೇದವಿತ್ತು. ಆದರೆ ಈಟಿವಿ, ಉದಯ ಟಿ.ವಿ.ಯವರು ತಮ್ಮ ಕ್ರೈಂ ಕಾರ್ಯಕ್ರಮಗಳಲ್ಲಿ ಈ ಬೆನ್ನಿ ಮಾಡಿದ ಅಕೃತ್ಯಗಳನ್ನು ಚೆನ್ನಾಗಿ ವರದಿ ಮಾಡಿದವು. ಇದರಿಂದ ಜನಜಾಗೃತಿಯಾಯಿತು. ಹಲವು ಮಠಾಧೀಶರು ಒಟ್ಟಿಗೆ ಸೇರಿ ಪ್ರತಿಭಟನಾ ಮೇಳನವೆನ್ನೇರ್ಪಡಿಸಿದ್ದರು. ಲಿಂಗಾಯತ ಸ್ಮಾರ್ತ ಮಾಧ್ವ ಶ್ರೀವೈಷ್ಣವ ಎಂಬ ಭೇದ ನೋಡದೆ ಒಬ್ಬ ಶತ್ರುವಿನ ವಿರುದ್ಧ ಸೇರಿದ್ದು ಸ್ವಾಗತಾರ್ಹ ಸಂಗತಿ. ಒಳ್ಳೆಯ ಕೆಲಸದಿಂದ ಸಾಧಿಸಲು ಆಗದ ಈ ಐಕ್ಯ ಈ "ಕೆಟ್ಟವ"ನಿಂದ ಬಂದಿದೆ. ಜನಜಾಗೃತಿ ಮೂಡಿಸುವ ದೃಷ್ಟಿಯಿಂದ ಬೆನ್ನಿ ಒಳ್ಳೆಯ ಕೆಲಸವನ್ನೇ ಮಾಡಿದ್ದಾನೆ.

ಆದರೆ ವಿಷಾದದ ವಿಷಯವೇನೆಂದರೆ ನಮ್ಮ ಸರ್ಕಾರ ಈ ಬೆನ್ನಿಗೆ ಕೊಡುತ್ತಿರುವ ಸವಲತ್ತುಗಳು. ಜಕ್ಕೂರು ವಿಮಾನ ನಿಲ್ದಾಣ ನಮ್ಮ ದೇಶದ ಸುರಕ್ಷೆಗೆ ಮೀಸಲಾದ ಸ್ಥಾನ. ಇಲ್ಲಿ ಪರದೇಶದವನೊಬ್ಬನನ್ನು ಆಹ್ವಾನಿಸಿ ಅವನು ಮೋಸ ಮಾಡಲು ಸಹಾಯ ಮಾಡುವುದು ಎಲ್ಲಿಯ ಜಾಣತನ ? ನಾ ಮುಂದು ತಾ ಮುಂದು ಎಂದು ಮಂತ್ರಿಗಳು (ಅರ್ಜುನ್ ಸಿಂಘ್, ಧರಮ್ ಸಿಂಘ್, ಆಂಧ್ರದ ರಾಜಶೇಖರ ರೆಡ್ಡಿ, ಸಿನಿಮಾ ತಾರೆಯರು) ಇವನ ಸಭೆಗೆ ಬರಲು ಮುನ್ನುಗ್ಗುತ್ತಿದ್ದರು. ಆದರೆ ಸ್ವಲ್ಪ ದೊಡ್ದ ರೂಪವನ್ನೇ ಪಡೆದ ವಿರೋಧ ಸಂಘಟನೆ ಮಂತ್ರಿಗಳ ಆಸೆಗೆ ತಣ್ಣೀರೆರಚಿದೆ. ಜೊತೆಗೆ ಕರ್ಣಾಟಕದ ಕ್ರೈಸ್ತ ಸಂಘ ಕೂಡ ಬೆನ್ನಿಯನ್ನು ವಿರೋಧಿಸಿದೆ. ಇದೂ ಒಳ್ಳೆಯ ಸಂಗತಿಯೇ. ಜನಪರ ಸಂಘಟನೆಯೊಂದು ಸರ್ಕಾರದ ಮಂತ್ರಿಗಳನ್ನು ಹೆದರಿಸಿ ಹಿಂದಕ್ಕೆ ಕಳುಹಿಸಿರುವುದನ್ನು ನೋಡಿ ನನಗೆ ಸಂತೋಷವೇ ಆಗುತ್ತಿದೆ.

ಬೆನ್ನಿ ಮಾರಾಯನೇ ! ನೀನು ಬರುವುದರಿಂದ ಪ್ರತಿಸಲವೂ ಜನಜಾಗೃತಿಯಾಗಿ ಐಕ್ಯದಿಂದ ನಿನ್ನನ್ನು ಜನರು ವಿರೋಧಿಸುವರು ಎಂದರೆ - ನೀನು ಪ್ರತಿವರ್ಷವೂ ಬೆಂಗಳೂರಿಗೆ ಬಾ ! ಇದರಿಂದಲಾದರೂ ಜನರಲ್ಲಿ ಒಮ್ಮತ ಸಹಕಾರ ಬುದ್ಧಿ ಬೆಳೆಯಲಿ! ಒಗ್ಗಟ್ಟು ಹೆಚ್ಚಲಿ! ದೇಶ ಶಕ್ತಿಯುತವಾಗಲಿ!

|| ಇತಿ ಶಮ್ ||

No comments: