KannadaAudio.com ::: Online Kannada Songs Portal
ಬಹಳ ಚೆನ್ನಾಗಿದೆ ಈ ಜಾಲತಾಣ. ಕಛೇರಿಯಲ್ಲಿ ಕುಳಿತು ಇದರ ಸಹಾಯದಿಂದಲೇ ನನಗೆ ಕೆಲಸ ಸಾಧ್ಯ. ಆದರೆ ಇವರು udbhava.com ನವರ ಹಾಗೆ login ಎಲ್ಲರಿಗೂ ಕೊಟ್ಟಿಲ್ಲ.
ಸದ್ಯಕ್ಕೆ ಸಿ.ಆಶ್ವಥ್ರ ನಿರ್ದೇಶನದ ಒಂದು ಸುರುಳಿ ಕೇಳುತ್ತಿದ್ದೇನೆ. ಚೆನ್ನಾಗಿದೆ. ಇವರ ಸಂಗೀತ ನನಗೆ ಅಷ್ಟೊಂದು ಹಿಡಿಸುತ್ತಿರಲಿಲ್ಲ. ಈಗ ಸ್ವಲ್ಪ ಚೆನ್ನಾಗಿ ಕೇಳಿಸುತ್ತಿದೆ. ಹಸಿದವನಿಗೆ ಏನಾದರೂ ಚೆನ್ನಾಗಿರುತ್ತದೆ ಅಂತೀರ ? ಇರಬಹುದೋ ಏನೋ!
ಭಾವಗೀತೆಗಳು ಕನ್ನಡಕ್ಕೆ ಸ್ವಲ್ಪ ವಿಶೇಷವಾಗಿ ಬಂದಂಥ ಸಂಗೀತ ಪ್ರಕಾರವೆನಿಸುತ್ತದೆ. ಬೇರೆ ಭಾಷೆಗಳಲ್ಲಿ ಈ ಮಟ್ಟಕ್ಕೆ ಸುಗಮ ಸಂಗೀತ ಏರಲು ಸಾಧ್ಯವಾಗಿಲ್ಲ. ಈ ಸಂಗೀತ "ಸುಗಮ" ವೆಂದು ತೋರಿದರೂ ಸಂಗೀತ ರಚನೆಕಾರರಿಗೆ "ದುರ್ಗಮ"ವೆಂದೇ ಹೇಳಬಹುದು. ಕವನಗಳ ನಿಜವಾದ ಅರ್ಥವನ್ನು ತಿಳಿದುಕೊಂಡು ಅದಕ್ಕೆ ಸರಿಯಾದ ರಾಗ ಮತ್ತು ತಾಳಗಳನ್ನಳವಡಿಸಿ ಹಾಡುವುದು ಸುಲಭಕೆಲಸವೇನಲ್ಲ.
ಆದರೆ ಬೇಂದ್ರೆಯವರ "ನೀ ಹೀಂಗ ನೋಡಬ್ಯಾಡ ನನ್ನ" ಎಂಬ ಕವನವನ್ನು ಪ್ರೇಮಕವನ ಮಾಡಿದಂಥ ದೊಡ್ಡ ನಿರ್ದೇಶಕರೂ ಇದ್ದಾರೆ. ಆದರೆ ಅಶ್ವಥ್ ರವರು ಹಾಗಿಲ್ಲವೆಂದೇ ಹೇಳಬೇಕು. ೨೦೦೦ ಇಸವಿಯ ಹ್ಯೂಸ್ಟನ್ ವಿಶ್ವ ಕನ್ನಡ ಸಮ್ಮೇಳನದ ಸಮಯದಲ್ಲಿ ಇವರು ಸ್ವಲ್ಪವೇನು ಬಹಳ ತಕರಾರನ್ನು ಎತ್ತಿದ್ದರು. ಯಾವುದೋ ಸ್ವಲ್ಪ ದುಡ್ಡು ಬರಲಿಲ್ಲವೆಂದು ಬಹಳ ಗಲಾಟೆ ಮಾಡಿದ್ದರು. ಆದರೆ ಕನ್ನಡದಲ್ಲಿ ಈಗ ಇವರಷ್ಟು ಜನಪ್ರಿಯ ಸುಗಮಸಂಗೀತ ನಿರ್ದೇಶಕರು ಇಲ್ಲವೆಂದೇ ಹೇಳಬೇಕು.
ಇರಲಿ. ಮತ್ತೊಮ್ಮೆ ನನ್ನ ಸುಗಮ ಸಂಗೀತದ ಆಸಕ್ತಿಯ ಬಗ್ಗೆ ಬರೆಯುತ್ತೇನೆ.
|| ಇತಿ ಶಮ್ ||
1 comment:
hai nanu kuda net nalli kannada hadu hagu kannada da yavude amsha vagali kanda thatkshan santhosha paduthene hegi hudukuva nanage kannadaaudio.com sikkithu nanage thumba kushi aaithu idaralli haleya hagu hosa chitra da hagu vivida tharahada manaranjane doreutthade.
inda shivakumar
Post a Comment