Monday, March 19, 2007

ಸರ್ವಜಿತ್ ಸಂವತ್ಸರದ ಹಾರ್ದಿಕ ಶುಭಾಶಯಗಳು

ನನ್ನ ಬಡಬ್ಲಾಗಿಗೆ ಬಂದು ಓದುವವರೆಲ್ಲರಿಗೂ ನೂತನ ಚಾಂದ್ರಮಾನಸಂವತ್ಸರದ ಹಾರ್ದಿಕ ಶುಭಾಶಯಗಳು. ಓದದವರಿಗೂ ಹಾರ್ದಿಕ ಶುಭಾಶಯಗಳು! ಆದರೆ ಇದನ್ನು ಓದದಿದ್ದರೆ ನನ್ನ ಶುಭಾಶಯಗಳು ಅವರನ್ನು ಮುಟ್ಟುವುದಿಲ್ಲವಲ್ಲ? ಆದರೇನು, ಪರೋಕ್ಷವಾಗಿಯಾದರೂ ಅವರಿಗೂ ನನ್ನ ಶುಭಾಶಯಗಳು ಸಲ್ಲುತ್ತವೆ.



ಇಂದು ಎಲ್ಲರೂ ಬೇವು-ಬೆಲ್ಲವನ್ನು



"ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯ ಚ |

ಸರ್ವಾರಿಷ್ಟವಿನಾಶಾಯ ನಿಂಬಕಂ ದಲಭಕ್ಷಣಮ್ ||"




ಎಂಬ ಶ್ಲೋಕವನ್ನು ಪಠಿಸಿ ಸೇವಿಸಿದ್ದೀರೆಂದು ನಂಬಿದ್ದೇನೆ. ಈ ವರ್ಷ ನಿಮಗೆ ಬೇವು ಬಂದರೂ ಅದು ಬೆಲ್ಲದ ಜೊತೆಗಿರಲಿ, ತಿನ್ನಲು ತುಂಬ ಕಹಿಯಾಗದಿರಲಿ.



ಸರ್ವಜಿತ್ ಎಂಬ ಹೆಸರು ಸೊಗಸಾಗಿರುವುದು. ಎಲ್ಲವನ್ನೂ ಗೆಲ್ಲುವುದು ಎಂಬುದು ಇದರ ಅರ್ಥ. ಆ ಹೆಸರಿನ ಪ್ರಕಾರ ಈ ಸಂವತ್ಸರವು ಎಲ್ಲರಿಗೂ ಜಯವನ್ನು ತಂದುಕೊಡಲಿ ಎಂದು ಹಾರೈಸುತ್ತೇನೆ.



|| ಶುಭಂ ಭೂಯಾತ್ ||

5 comments:

Anonymous said...

thanks nilagriva for the wishes.
wish you a happy ugadi too.
take care and regards
bellur

Anonymous said...

and yes, me and my family recited the shloka and had bevu-bella.

Anonymous said...

got a doubt:
"dalabhakshanam" : is it daLa or dala?

nIlagrIva said...

RK,
Thanks for the wishes!

It is "dala" and not "daLa" as there is no "La"-kAra in the Samskrit alphabet (at least in non-vedic Samskrit).

Best,
-nIlagrIva

Anonymous said...

ಪರಿಚಯಿಸಲು ಖುಷಿಯಾಗುತ್ತಿದೆ:

"ಹುಚ್ಚು ಮನಸಿನ ಹಲವು ಮುಖಗಳ ಹುಡುಗಿ.. "

http://archana-hebbar.blogspot.com/

(ಈಗ ಜೀವವಿಜ್ನಾನಿ ಅರ್ಚನಾ ಧಾಮಿಯಾಗಿ ಲಂಡನ್ ನಲ್ಲಿ ಇದ್ದಾರೆ ಎಂದು ಅಂದುಕೊಂಡಿದ್ದೇನೆ - ತಪ್ಪು ತಿಳುವಳಿಕೆಯಾಗಿದ್ದರೆ ಕ್ಷಮೆ ಕೋರುತ್ತೇನೆ.)