The Week
ಭಾರತದಲ್ಲಿ ಮೊದಲ ಬಾರಿಗೆ ಈ ಕಡಿಮೆ ದರದ ವಿಮಾನಯಾತ್ರೆಗಳು ಕಾಣತೊಡಗಿವೆ.
ನನಗೆ ನೆನೆಪಿದೆ. ನಾ ಚಿಕ್ಕವನಾಗಿದ್ದಾಗ ದಿನಕ್ಕೊಮ್ಮೆಯೋ ಎರಡು ಬಾರಿಯಾಒ ಕಾಣಿಸಿಕೊಳ್ಳುತ್ತಿದ್ದ ವಿಮಾನಗಳಿಗೆ ಟಾಟಾ ಎಂದು ಕಿರುಚುತ್ತಾ ಓಡುತ್ತಿದ್ದೆ. ಬೇರೆಯ ಮಕ್ಕಳೂ ನನ್ನ ಹಾಗೆಯೇ. ವಿಮಾನದಲ್ಲಿ ಪ್ರಯಾಣವೆಂದರೆ ಒಂದು ಸೌಭಾಗ್ಯವೆಂದೇ ಭಾವನೆ. "ಬಹಳ ಧನವಂತರು ಇವರು - ವಿಮಾನದಲ್ಲಿ ಪ್ರಯಾಣ ಮಾಡಿದ್ದಾರೆ" - ಎಂಬ ಯೋಚನೆಗಳಾಗ ಸರ್ವೇ ಸಾಮಾನ್ಯ. ಬೆಂಗಳೂರಿನ ವಿಮಾನ ನಿಲ್ಡಾಣವನ್ನು ನಾನು ನೋಡಿಯೇ ಇರಲಿಲ್ಲ. ಮೊದಲ ಸಲ ನೋಡಿದ್ದು ಅಮೇರಿಕ್ಯೆಯಿಂದ ಬೆಂಗಳೂರಿಗೆ ಮರಳಿದಾಗ! ಅಮೇರಿಕಕ್ಕೆ ಮೊದಲ ಬಾರಿಗೆ ತೆರಳುವಾಗ ಮದರಾಸಿನಿಂದ ಹಾರಿದ್ದೆ. ಎರಡು ವರ್ಷಗಳ ನಂತರ ಮೊದಲ ಸಲ ಬೆಂಗಳೂರಿಗೆ ಬ್ಬಂದಾಗಲೇ ಅಲ್ಲಿನ ನಿಲ್ದಾಣವನ್ನು ನೋಡಿದ್ದು.
ಅಮೇರಿಕೆಯಲ್ಲಿ ವಿಮಾನಯಾತ್ರೆಗಳನ್ನು ಮಾಡಿದ ಮೇಲೆಯೇ ಇದು ಕೇವಲ ಮತ್ತೊಂದು ಸಾರಿಗೆ ವ್ಯವಸ್ಥೆ ಎಂದು ಮನದಟ್ಟಾಗಿದ್ದು. ಅಮೇರಿಕೆಯಲ್ಲಿ ಎಲ್ಲಿಂದೆಲ್ಲಿಗೆ ಓಡಾಡಬೇಕಾದರೂ ವಿಮಾನವೇ! ಎಲ್ಲಿಂದೆಲ್ಲಿಗೆ ಅಂದರೆ ಐನೂರು ಮೈಲಿಗಳಿಗಿಂತ ಹೆಚ್ಚಿಗೆ ದೂರದಲ್ಲಿರುವೆ ಸ್ಥಳಗಳು. ಅಮೇರಿಕೆಯಲ್ಲಿ ಬಡವರೂ ಶ್ರೀಮಂತರೂ ಇದೇ ವಿಮಾನಯಾತ್ರೆಯನ್ನು ಉಪಯೋಗಿಸುತ್ತಾರೆ. ಇನ್ನೊಂದು ವಿಷಯ. ಅಮೇರಿಕೆಯ ವಿಮಾನಗಳು ನಮ್ಮ ದೇಶದ ರೈಲು ಬಸ್ಸುಗಳಿದ್ದ ಹಾಗೆ. ಬಸ್ಸುಗಳಲ್ಲಿ ರೈಲುಗಳಲ್ಲಿ ಓಡಾಡುವವರೇ ವಿರಳ ಎನ್ನಬಹುದು.
ನಮ್ಮ ದೇಶದಲ್ಲಿ ಈ ರೀತಿ ಯಾವಾಗ ನಡೆಯಬಹುದೋ ಎಂದು ಕನಸು ಕಾಣತೊಡಗಿದಾಗ ಕ್ಯಾಪ್ಟನ್ ಗೋಪಿನಾಥ ಎನ್ನುವವರು ಅವರ ಡೆಕ್ಕನ್ ಏವಿಯೇಷನ್ ಸಂಸ್ಥೆಯ ಮೂಲಕ ಸುಲಭ ದರದ ವಿಮಾನಯಾತ್ರೆಗಳನ್ನು ಒದಗಿಸಿದ್ದಾರೆ. ಮೇಲಿನ ಲೇಖನ ಇದರ ಬಗ್ಗೆಯೇ ಮಾತಾಡುತ್ತದೆ. ಇವರ ಜೊತೆಗೆ ಮಲ್ಲ್ ಯ, ಇಂಡಿಯನ್ ಏರ್ಲೈನ್ಸ್ ಮುಂತಾದ ಸಂಸ್ಥೆಗಳೂ ಸುಲಭದರದ ಯಾತ್ರೆಗಳನ್ನು ಒದಗಿಸುವ ವಿಚಾರ ಮಾಡಿದ್ದಾರೆ. ಎಲ್ಲಕ್ಕೂ ಕಾಲ ಕೂಡಿ ಬರಬೇಕು ಅನ್ನುತ್ತಾರಲ್ಲಾ, ಹಾಗೆ ನಮ್ಮಲ್ಲಿ ಈಗ ಕಾಲ ಕೂಡಿ ಬಂದಿದೆ. ಸರ್ಕಾರವು ವಿಮಾನಯಾನ ಸಂಸ್ಥೆಗಳಿಗೆ ಕಾರ್ಯ ನಡೆಸಲು ಸೌಲಭ್ಯಗಳನ್ನು ಒದಗಿಸಿದೆ. ಆದರೆ ಇವೆಲ್ಲದಕ್ಕೂ ಮೂಲಕಾರಣ ನಮ್ಮ ಜನತಾ ಜನಾರ್ದನ. ಮಧ್ಯ್ಮ ವರ್ಗದ ಪ್ರಜೆಗಳು ಭಾರತದಲ್ಲಿ ತೀವ್ರಗತಿಯಲ್ಲಿ ಮೇಲೆ ಬರುತ್ತಿದ್ದಾರೆ. ಇವರ ಸಂಖ್ಯೆ ಮಾತ್ರ ಹೆಚ್ಚಿದ್ದಲ್ಲದೆ ಇವರ ಆರ್ಥಿಕ ಸ್ಥಿತಿಯೂ ಸುಧಾರಿಸಿದೆ. ಧನವಿರುವಾಗ ಅದನ್ನು ಖರ್ಚು ಮಾದಬೇಡವೇ! ಯಾತ್ರೆಗೆ ರೈಲಿನ ಬದಲು ವಿಮಾನವನ್ನೇ ಬಳಸಿದರಾಯ್ತು! ರೈಲುದರಗಳೂ ಕಡಿಮೆಯೇನಿಲ್ಲ. ಸ್ವಲ್ಪ ಹೆಚ್ಚು ದುಡ್ಡು ಕೊಟ್ಟಿದ್ದೇ ಆದರೇ ಆರಾಮವಾಗಿ ಮತ್ತು ಶೀಘ್ರವಾಗಿ ತಮ್ಮ ತಾಣಗಳನ್ನು ಸೇರಬಹುದು. ರೈಲಿನವರು ಈ ವಿಷಯವನ್ನು ಗಮನಿಸಲೇ ಬೇಕು.
ವೈಯಕ್ತಿಕವಾಗಿ ನನಗೆ ಈ ಬೆಳವಣಿಗೆ ಬಹಳ ಸಂತೋಷವನ್ನುಂಟು ಮಾಡಿದೆ. ಈ ಸೌಕರ್ಯದಿಂದ ನಮ್ಮ ದೇಶದ ಪ್ರವಾಸೋದ್ಯಮ ಚೆನ್ನಾಗಿ ಬೆಳೆಯುವುದರಲ್ಲಿ ಸಂಶಯವೇ ಇಲ್ಲ. ಪ್ರವಾಸೋದ್ಯಮ ಬೆಳೆದಲ್ಲಿ ಸಂಪತ್ತು ದೇಶದೆಲ್ಲೆಡೆ ಹರಡುತ್ತದೆ.
ಪ್ರವಾಸೋದ್ಯಮ ಇಲಾಖೆಯವರು ನಮ್ಮ ಸುಂದರ ನೈಸರ್ಗಿಕ ಸಂಪದ್ಭರಿತವಾದ ದೇಶವನ್ನು ಪ್ರವಾಸಿಗಳಿಗೆ ಇನ್ನಷ್ಟೂ ಆಕರ್ಷಕವಾಗಿ ಮಾಡಿದರೆ ಬಹಳ ಜನಗಳಿಗೆ ಉಪಕಾರವಾಗುತ್ತದೆ.
ಎಲ್ಲಿಂದೆಲ್ಲಿಗೋ ಬಂದುಬಿಟ್ಟೆ. ಇರಲಿ. ಇದನ್ನು ಯಾರು ಓದುವರೋ ನಾ ಕಾಣೆ. ನನಗಂತೂ ಈ ಬರವಣಿಗೆಯಿಂದ ಸಂತೋಷ. ಮುಂದೊಂದು ದಿನ - "ಓಹೋ ಇದನ್ನು ನೋಡಿ ಹಾಗೆ ಯೋಚಿಸಿದ್ದೆನೇ!" ಎಂದು ಉದ್ಗರಿಸಿ ವ್ಹಾ ಎಂದಾಗಲೀ ಥೂ ಎಂದಾಗಲೀ ಹೇಳುವುದಕ್ಕೆ ಅವಕಾಶವಾಗುತ್ತದೆ.
|| ಇತಿ ಶಮ್ ||
1 comment:
ಕಡಿಮೆ ಬೆಲೆಯ ವಿಮಾನಯಾನ ಒಳ್ಳೆಯದಾದರೂ ಈ ವಿಮಾನಗಳು ಸುರಕ್ಷಿತ ಹೌದೋ ಅಲ್ಲವೋ ಹೇಗೆ ತಿಳಿಯುವುದು? ಮೊನ್ನೆಯ ಚುನಾವಣೆಗೆ ಮುಂಚೆ ನಟಿ ಸೌಂದರ್ಯ ವಿಮಾನಾಘಾತದಲ್ಲಿ ಸಾವನ್ನಪ್ಪಿದಳು. ನಂತರ ತಿಳಿದುಬಂದ ಪ್ರಕಾರ ಆ ವಿಮಾನ ಸಾಕಷ್ಟು ಸುರಕ್ಷಿತವಾಗಿರಲಿಲ್ಲವಂತೆ. Low cost Airlines ಎಂದರೆ ನನಗೆ ಯೋಚನೆ ಇದೇ ಬರುವುದು.
Post a Comment