Most Kannada films are one-day wonders - Deccan Herald
ಇನ್ನೇನು ಕೆಲವೇ ದಿನಗಳು. ಅಮೇರಿಕೆಯಿಂದ ಭಾರತಕ್ಕೆ, ಕರ್ಣಾಟಕಕ್ಕೆ ಬೆಂಗಳೂರಿಗೆ ಮರಳುವುದಕ್ಕೆ. ಹೀಗೆ browse ಮಾಡುತಿದ್ದಾಗ ಕಂಡ ಲೇಖನವಿದು.
ನಮ್ಮ ಕನ್ನಡ ಚಲನಚಿತ್ರಗಳ ಪರಿಸ್ಥಿತಿ ದೇವರಿಗೇ ಪ್ರೀತಿ. ಕನ್ನಡ ಚಿತ್ರಗಳು ಬಹುತೇಕ ಬೇರೆ ಭಾಷೆಗಳಿಂದ ರೀಮೇಕ್ ಆದವುಗಳೇ. ಅದೂ ಮೂಲ ಚಿತ್ರದ ಸೊಬಗು ಇದರಲ್ಲಿರುವುದಿಲ್ಲ. ಇನ್ನೊಂದೇನೆಂದರೆ ಬೆಂಗಳೂರಿನಲ್ಲಿ ಆರು ಭಾಷೆಗಳ ಚಿತ್ರಗಳು ಪ್ರದರ್ಶನಗೊಳ್ಳುತ್ತವೆ. ಆದ್ದರಿಂದ ಒರಿಜಿನಲ್ ಚಿತ್ರ ನೋಡಲು ಸಿಗುವಾಗ ನಕಲು ಚಿತ್ರವನ್ನು ಏಕೆ ನೋಡಬೇಕು ?
ರಾಜಕುಮಾರ್ ತಂಡದ ನೇತೃತ್ವದಲ್ಲಿ ನಡೆದ ಮುಷ್ಕರ ನಿಜವಾಗಲೂ ಖಂಡನೀಯ. ಆಣ್ಣಾವ್ರು ಮಹಾನ್ ಕಲಾವಿದರು. ಅವರ ಮಕ್ಕಳು ಅವರ ಹತ್ತಿರ ಕೂಡ ಸುಳಿಯುವುದಿಲ್ಲ ಅನ್ನುವುದನ್ನು ಬೇರೆಯವರು ಅರ್ಥಮಾಡಿಕೊಳ್ಳಬೇಕು. ನಮ್ಮ ಚಿತ್ರಗಳು ಅಷ್ಟು ಕಳಪೆ ಮಟ್ಟದ್ದಾಗಿರುವಾಗ ಬೇರೆ ಭಾಷೆಗಳ ಚಿತ್ರಗಳನ್ನು ವಿರೋಧಿಸಿ ನಾವು ಸಾಧಿಸುವುದಾದರೂ ಏನು ? ಬರೇ ಕನ್ನಡ ಚಿತ್ರಗಳು ತೆರೆಯ ಮೇಲೆ ಕಂಡರೆ ಚಿತ್ರರಸಿಕರು ಅವುಗಳನ್ನು ಮಾತ್ರ ನೋಡುತ್ತಾರೆಂಬುದು ಶುದ್ಧ ತಪ್ಪು ಕಲ್ಪನೆ. ಆಗ ವೀಕ್ಷಕರು ಮನೆಯಲ್ಲೇ ಕುಳಿತು ಕೇಬಲ್ ಮೂಲಕ ತಮಗೆ ಬೇಕಾದ ಚಿತ್ರಗಳನ್ನು ನೋಡುತ್ತಾರೆ. ಥಿಯೇಟರ್ ಪ್ರದರ್ಶಕರಿಗೆ ಮಾತ್ರ ಪೆಟ್ಟು ತಗಲುತ್ತದೆ.
ಹೌದು, ನಮ್ಮ ಚಿತ್ರರಂಗಕ್ಕೆ ಇದೆಂಥಾ ದೆವ್ವ ಮೆಟ್ಟಿದೆ ? ಈ ವರ್ಷವಂತೂ ತೀರ ಕಳಪೆ ಚಿತ್ರವಾದ ಪ್ರೀತಿ-ಪ್ರೇಮ-ಪ್ರಣಯ ಚಿತ್ರಕ್ಕೆ ಉತ್ತಮ ಚಿತ್ರ ಪ್ರಶಸ್ತಿ ದೊರೆತಿದೆ. ಎಲ್ಲಿಂದ ಎಲ್ಲಿಗೆ ಬಂದಿದ್ದೇವೆ ? ಗಿರೀಶ ಕಾಸರವಳ್ಳಿ ಸೀತಾರಾಂ ಹೆಸರು ಮಾತ್ರ ಕೇಳುತ್ತದೆ. ಬೇರೆ ಸಮರ್ಥ ನಿರ್ದೇಶಕರು ನಮ್ಮಲ್ಲಿಲ್ಲವೇ ? ಅಂಥಾ ಉತ್ತಮ ಕಲಾವಿದರನ್ನು ಹೊಂದಂಥ ಕನ್ನಡ ಚಿತ್ರರಂಗಕ್ಕೆ ಒಳ್ಳೆಯ ಸಾರಥಿಗಳ ಕೊರತೆಯಿದೆ. ಸ್ವಲ್ಪ ರಿಸ್ಕ್ ಅನ್ನಿಸಿದರೂ ಸರಿ ಹಣ ಸುರಿದು ಸ್ವಮೇಕ್ ಚಿತ್ರ ನಿರ್ಮಿಸಿ ಗೆಲ್ಲುವ ಛಾತಿ ಇರುವವರು ನಮ್ಮಲ್ಲಿ ಕಡಮೆಯಾಗಿದ್ದಾರೆ. ರವಿಚಂದ್ರನ್ ಮಾತ್ರ ಹೀಗೆ ಅದ್ದೂರಿ ಮಸಾಲೆ ಚಿತ್ರಗಳನ್ನು ನಿರ್ಮಿಸಿ ಗೆಲ್ಲಬಲ್ಲರು. ಬೇರೆ ಯಾರ ಬಳಿಯೂ ದುಡ್ಡಿಲ್ಲ. ಧೈರ್ಯವೂ ಇಲ್ಲ.
ಇದರ ಜೊತೆಗೆ ಸಪ್ಪೆ ಊಟವನ್ನು ಒಂದು ಹೋಟೆಲಿನಲ್ಲಿ ಉಂಡವನು ಅಲ್ಲಿ ಮತ್ತೆ ಹೋಗುವುದಿಲ್ಲ. ಪೂರ್ವಾಪರದಂಥ ಒಳ್ಲೆಯ ಚಿತ್ರ ನಿರ್ಮಾಣವಾದರೂ ಅದನ್ನು ನೋಡುವವರಿಲ್ಲ. ಏಕೆಂದರೆ ಹೋಟೆಲಿನಲ್ಲಿ ಕೆಟ್ತ ಅಡುಗೆಯವರು ಸೇರಿದ್ದಾರೆ. ಹೋಟೆಲಿನ ಮ್ಯಾನೇಜರರು ಇದನ್ನು ಗಮನಿಸಬೇಕು. ಹೊಸ ಅಡುಗೆಯವರಿಗೆ ಒಳ್ಲೆಯ ಅಡುಗೆಯವರಿಗೆ ಅವಕಾಶಮಾಡಿಕೊಡಬೇಕು. ಅದಾದ ಮೇಲೆ ಒಬ್ಬೊಬ್ಬ ಗ್ರಾಹಕನಿಂದ ಕಳೆದು ಹೋದ ಹೆಸರನ್ನು ಮತ್ತೆ ಸಂಪಾದಿಸಬೇಕು. ಆಗ ಮೂಂಚಿನಂತೆ ಹೋಟೆಲ್ ಜನರಿಂದ ಕಿಕ್ಕಿರಿಯುತ್ತದೆ. ನಮ್ಮ ಚಿತ್ರರಂಗಕ್ಕೂ ಇದೇ ಔಷಧಿ !
ತನ್ನತನವನ್ನು ಹೊಂದಿದ್ದ ಕನ್ನಡ ಚಿತ್ರರಂಗ ತನ್ನ ಸೊಬಗನ್ನು ಕಳೆದುಕೊಂಡಿದೆ. ಇದೇ ರೀತಿ ಮುಂದುವರೆದರೆ ನಮ್ಮ ಚಿತ್ರರಂಗ ಚರಿತ್ರೆಯಲ್ಲೂ ಸೇರದೆ ನಶಿಸಿಹೋಗುತ್ತದೆ. ಏಕೆಂದರೆ ಬೇಲೂರು ಹಳೇಬೀಡುಗಳು ಸುಂದರವಾಗಿದ್ದವು ಅನ್ನುವ ಮಾತ್ರಕ್ಕೆ ಇತಿಹಾಸದಲ್ಲಿ ಸೇರುವ ಸಾಮರ್ಥ್ಯವನ್ನು ಪಡೆದಿವೆ. ತೀರಾ ಸುಮಾರಾದ ನಮ್ಮ ಚಿತ್ರರಂಗಕ್ಕೆ ಯಾವ ವೈಶಿಷ್ಟ್ಯ ?
3 comments:
ಗುರುವೇ .. ನಮಸ್ಕಾರ ... ಬಹಳ ಕುಷಿ ಆಯ್ತು ಕನ್ನಡದಲ್ಲಿ blog ಮಾಡೋರ್ನ ನೋಡಿ .. ಮತ್ತೆ ಬರೀತೇನೆ.. ನಿಮ್ಮ blog ಇನ್ನೂ ಓದಿಲ್ಲ.. ಕನ್ನಡ ಕಂಡ ತಕ್ಷಣ ಏನಾದ್ರು ಗೀಚ್ಬೇಕು ಅನ್ನಿಸ್ತು .. :)
संस्क्रुतॆ अपि blog_यति वा ? समेचीनं.. कुत्र अस्ति? अहम् तु सद्यः NY राज्यॆ अस्मि..ऎतत् वारान्त्यं बेंगळूरु गमिष्यामि ।
अतीव संतुष्टॊSस्मि ॥
इति.. कार्तिकः
महान् प्रमोदः यत् भवान् संस्कृतं जानाति ।
संस्कृतब्लाग् तु अत्रैवास्ति अस्मिन् ब्लाग्-मध्ये एव । परन्तु यदहं चिन्तयामि तदनुसृत्य आङ्ग्लेन वा कन्नडेन वा संस्कृतेन लिख्यते मया । यदि वेदान्तविषयं वा संस्कृतविषयं वा चिन्तयामि तर्हि संस्कृतेन वा कन्नडेन वा लिखामि ।
भवतु । अहमपि भानुवासरे बेंगळूरुनगरे भविष्यामि । तत्रैव वसामि अपि ।
शुभं भूयात् ।
Post a Comment